Thursday, October 1, 2026

BDA Apartments

Home Crime ಸೆಟಲ್ಮೆಂಟ್ ಹೆಸರಿನಲ್ಲಿ ಕರೆಸಿ ಮಾರಣಾಂತಿಕ ಹಲ್ಲೆ?    

ಸೆಟಲ್ಮೆಂಟ್ ಹೆಸರಿನಲ್ಲಿ ಕರೆಸಿ ಮಾರಣಾಂತಿಕ ಹಲ್ಲೆ?    

ಮೈಸೂರು,ಅಕ್ಟೋಬರ್‌,1,2026 (www.justkannada.in) ಸೆಟಲ್ಮೆಂಟ್ ಮಾಡುವುದಾಗಿ ಕರೆಸಿಕೊಂಡು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಮೈಸೂರಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಿನ್ನತಂಬಿ @ ಸೌಂದರ್ಯರಾಜ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರ ಕಾರ್ಯವೈಖರಿ ಹಾಗೂ ಗಾಯಾಳುಗಳಿಗೆ ಸಿಗುತ್ತಿರುವ ಚಿಕಿತ್ಸೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ.

ಶ್ರೀರಾಂಪುರ 2ನೇ ಹಂತದ ಕ್ಲಬ್‌ ವೊಂದರ ಬಳಿ ತೆರಳಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಲೋಕೇಶ್, ಲಗ್ಗೆರೆ ನಿವಾಸಿ ಸಂತೋಷ್, ಹಾಸನದ ಮಹೇಶ್ ಹಾಗೂ ಮೈಸೂರಿನ ಸಾಲುಂಡಿ ನಿವಾಸಿ ಶೋಭಾ ಮೇಲೆ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.Lured under assult

ಕಲ್ಲು, ಕಾರ್ ಜಾಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತಲೆ, ಕೈ, ಹೊಟ್ಟೆ, ಕಪಾಳ ಹಾಗೂ ಹಣೆಗೆ ಗಾಯಗಳಾಗಿದ್ದು, ಲೋಕೇಶ್ ಮತ್ತು ಸಂತೋಷ್‌ ಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಲಾಗಿದೆ. ಕೈ-ಕಾಲು ಮುರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ನಾಲ್ವರು ವ್ಯಕ್ತಿಗಳ ಚಿನ್ನದ ಸರ ಹಾಗೂ ಮೊಬೈಲ್‌ ಗಳನ್ನು ಕಿತ್ತುಕೊಂಡು ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಸಿಎಂ, ಗೃಹಸಚಿವರಿಗೆ ದೂರು ನೀಡಿದ್ದಕ್ಕೆ ಹಲ್ಲೆಯೇ?

ಚಿನ್ನತಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರ ಬಳಿ ದೂರು ನೀಡಿದ್ದಕ್ಕೆ ಆಕ್ರೋಶಗೊಂಡು ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಮೈಸೂರು ಪೊಲೀಸರು ಹಾಗೂ ಪೊಲೀಸ್ ಕಮೀಷನರ್ ವಿರುದ್ಧ ದೂರು ನೀಡುತ್ತೀರಾ?” ಎಂದು ಪ್ರಶ್ನಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ವಿರುದ್ಧವೇ ಸಂತ್ರಸ್ತರ ಗಂಭೀರ ಆರೋಪ

ಹಲ್ಲೆಗೊಳಗಾದವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಹಲ್ಲೆ, ಹತ್ಯೆ ಯತ್ನ ನಡೆದರೂ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಚಿನ್ನತಂಬಿ ಪರ ಪೊಲೀಸರು ಇದ್ದಾರೆ” ಎಂದು ಆರೋಪಿಸಿದ್ದಾರೆ.

ಪೊಲೀಸರ ಮೊಬೈಲ್ ಕಿತ್ತುಕೊಂಡರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಚಿನ್ನತಂಬಿಯ ಕಾಲ್‌ ಲೀಸ್ಟ್ ಪರಿಶೀಲಿಸಿದರೆ ಪ್ರಕರಣದಲ್ಲಿ ಯಾರಾದರೂ ಪೊಲೀಸರ ಸಂಪರ್ಕ ಅಥವಾ ಪಾತ್ರವಿದೆಯೇ ಎಂಬುದು ಬಯಲಾಗಲಿದೆ ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಈ ಆರೋಪಗಳು ನಿಜವೇ? ಅಥವಾ ತನಿಖೆಯಲ್ಲಿ ಬೇರೆಯದೇ ಸಂಗತಿ ಹೊರಬರಲಿದೆಯೇ? ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

“ರಾತ್ರಿ 2 ಗಂಟೆಗೆ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು. ಕೈ-ಕಾಲು ಮುರಿದಿದ್ದರೂ ಚಿಕಿತ್ಸೆ ನೀಡಲಿಲ್ಲ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡಿಸುತ್ತಿದ್ದಾರೆ” ಎಂದು ಗಾಯಾಳುಗಳು ಅಳಲು ತೋಡಿಕೊಂಡಿದ್ದಾರೆ.Lured under attack

ಲೋಕೇಶ್‌ ಗೆ ಆರು ಸ್ಟಿಚ್‌ ಹಾಕಿದ ಬಳಿಕವೂ ಚಿಕಿತ್ಸೆ ಮುಂದುವರಿಸದೆ ತೆರಳುವಂತೆ ಸೂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೆ.ಆರ್. ಆಸ್ಪತ್ರೆಯಿಂದ ಟ್ರಾಮಾ ಕೇರ್‌ ಗೆ ಕರೆತರಲಾಗಿದ್ದು, ಅಲ್ಲಿಯೂ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಆಸ್ಪತ್ರೆಯ ಹೊರಭಾಗದ ಬೆಂಚ್ ಮೇಲೆ ನರಳಾಡುತ್ತಿದ್ದ ಗಾಯಾಳು ಲೋಕೇಶ್—ಈ ದೃಶ್ಯವೇ ವ್ಯವಸ್ಥೆಯ ಮಾನವೀಯತೆಯನ್ನು ಪ್ರಶ್ನಿಸುವಂತಿದೆ ಎಂದು ಸಂತ್ರಸ್ತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ವೈಫಲ್ಯವೇ? ಹಲವು ಪ್ರಶ್ನೆಗಳು

* ಸೆಟಲ್ಮೆಂಟ್ ಹೆಸರಿನಲ್ಲಿ ಕರೆಸಿಕೊಂಡಿದ್ದರೆ, ಅಲ್ಲಿ ನಡೆದ ಹಲ್ಲೆಯನ್ನು ಪೊಲೀಸರು ಮುಂಚಿತವಾಗಿ ತಡೆಯಲು ವಿಫಲರಾದರೇ?

* ಮಾರಣಾಂತಿಕ ಹಲ್ಲೆ ಆರೋಪವಿದ್ದರೂ ತಕ್ಷಣದ ಕಾನೂನು ಕ್ರಮ ಏಕೆ?

* ಚಿನ್ನದ ಸರ, ಮೊಬೈಲ್ ಕಿತ್ತುಕೊಂಡ ಆರೋಪದ ಬಗ್ಗೆ ತನಿಖೆ ಎಲ್ಲಿಗೆ ತಲುಪಿದೆ?

* ಪೊಲೀಸರ ಮೊಬೈಲ್ ಕಿತ್ತುಕೊಂಡಿದ್ದಾರೆ ಎನ್ನುವ ಆರೋಪದ ಸತ್ಯಾಸತ್ಯತೆ ಏನು?

* ಸಂತ್ರಸ್ತರು ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ದೂರು ನೀಡಿದ ನಂತರವೇ ಹಲ್ಲೆ ನಡೆದಿದೆ ಎನ್ನುವ ಆರೋಪದ ಬಗ್ಗೆ ತನಿಖೆ ನಡೆದಿದೆಯೇ?

* ಪೊಲೀಸರೇ ಆರೋಪಿಗಳ ಪರ ನಿಂತಿದ್ದಾರೆ ಎಂಬ ಸಂತ್ರಸ್ತರ ಆರೋಪಕ್ಕೆ ಪೊಲೀಸ್ ಇಲಾಖೆಯ ಉತ್ತರವೇನು?

* ಗಂಭೀರವಾಗಿ ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎನ್ನುವ ಆರೋಪದ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಲಿದೆಯೇ?

* ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು ಎಂಬುದನ್ನು ಪೊಲೀಸರು ಯಾವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಧರಿಸಲಿದ್ದಾರೆ?

ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಿ, ಸಂತ್ರಸ್ತರಿಗೆ ರಕ್ಷಣೆ ಮತ್ತು ಕಾನೂನುಬದ್ಧ ನೆರವು ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವಿದೆಯೇ, ಪ್ರಭಾವಿಗಳ ಒತ್ತಡವಿದೆಯೇ ಅಥವಾ ಸಂತ್ರಸ್ತರ ಆರೋಪಗಳಿಗೆ ಬೇರೆ ವಾಸ್ತವಿಕ ಹಿನ್ನೆಲೆಯಿದೆಯೇ? ಎಂಬುದಕ್ಕೆ ತನಿಖೆಯೇ ಉತ್ತರ ನೀಡಬೇಕಿದೆ.pretext jk02_new jk02 new

 

English Summary
Title

Crime in Mysuru: Customer Suffers Assault Over Settlement Dispute

Short Description
A customer faced a life-threatening assault in Mysuru after being lured to the city under the pretext of a dispute settlement. This shocking incident highlights dangerous criminal trends involving premeditated setups. Legal experts state that victims of criminal assault in Karnataka must immediately file a First Information Report (FIR) with the Mysuru Police and secure a Medico-Legal Case (MLC) hospital record. To ensure justice under the Bharatiya Nyaya Sanhita (BNS), it is vital to preserve all digital evidence, including call logs and messages used to summon the victim, establishing clear criminal conspiracy.
Keywords
Lured under, pretext, settlement, deadly, assault, Mysore