Thursday, October 1, 2026

BDA Apartments

Home Crime ಗಣೇಶ ಹಬ್ಬಕ್ಕೆಂದು ಬಂದಿದ್ದ ಯುವಕನ ಬರ್ಬರ ಹತ್ಯೆ

ಗಣೇಶ ಹಬ್ಬಕ್ಕೆಂದು ಬಂದಿದ್ದ ಯುವಕನ ಬರ್ಬರ ಹತ್ಯೆ

ಮೈಸೂರು ಅಕ್ಟೋಬರ್‌,1,2026 (www.justkannada.in): ಗಣೇಶ ಹಬ್ಬದ ಸಂಭ್ರಮಕ್ಕೆಂದು ಹಾಸನದಿಂದ ಮೈಸೂರಿಗೆ ಬಂದಿದ್ದ 20 ವರ್ಷದ ಯುವಕನೊಬ್ಬ ಮಧ್ಯರಾತ್ರಿ ನಡೆದ ಗಲಾಟೆಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಮೈಸೂರಿನ ಮೆಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಮೂಲದ ಗೌರವ್ (20) ಮೃತ ಯುವಕ ಎಂದು ಗುರುತಿಸಲಾಗಿದೆ. ಹಬ್ಬದ ಪ್ರಯುಕ್ತ ನಿನ್ನೆ ಮೈಸೂರಿಗೆ ಬಂದಿದ್ದ ಗೌರವ್, ಮಧ್ಯರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಮೆಟಗಳ್ಳಿ ವ್ಯಾಪ್ತಿಯಲ್ಲಿ ಸ್ನೇಹಿತರೊಂದಿಗೆ ಇದ್ದ ವೇಳೆ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ.Mysore

ಇದೇ ವಿಚಾರವನ್ನು ದೊಡ್ಡದಾಗಿ ಮಾಡಿಕೊಂಡ ಆರೋಪಿಗಳಾದ ಅಭಿ, ಅರ್ಜುನ್ ಮತ್ತು ಆತನ ಗ್ಯಾಂಗ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೌರವ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸರ ತನಿಖೆ ಚುರುಕು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೆಟಗಳ್ಳಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳಾದ ಅಭಿ, ಅರ್ಜುನ್ ಮತ್ತು ಗ್ಯಾಂಗ್ ಗಾಗಿ ತೀವ್ರ ಶೋಧ ನಡೆಸಿದ್ದಾರೆ.Mysore jk02_new jk02 new

 

English Summary
Title

Brutal murder of a young man who had come for the Ganesha festival.

Short Description
A 20-year-old youth from Hassan, who had come to Mysuru for the Ganesha festival celebrations, was brutally murdered following an altercation at midnight; the incident occurred within the limits of the Metagalli police station. The deceased has been identified as Gaurav (20), a native of Hassan. Gaurav, who had arrived in Mysuru for the festival, was with friends in the Metagalli area around 1 AM when a verbal dispute arose over a trivial matter.
Keywords
Mysore, Brutal murder, young, Ganesha festival.