ಬೆಂಗಳೂರು,ಅಕ್ಟೋಬರ್,1,2026 (www.justkannada.in): ಸರ್ಕಾರಿ ಬಸ್ ಟಿಕಟ್ ದರ ಹೆಚ್ಚಳದ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್ ಸುಳಿವು ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ಭೈರತಿ ಸುರೇಶ್, ನಾವು 2025ರಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದವು. ಈಗ ಡಿಸೇಲ್ ಪೆಟ್ರೋಲ್ ದರ 15ರಿಂದ 16 ರೂ ಹೆಚ್ಚಳವಾಗಿದೆ. 
ನಾಲ್ಕು ಸಾರಿಗೆ ನಿಗಮಗಳಿಗೆ ವರದಿ ನೀಡುವಂತೆ ಹೇಳಿದ್ದವು. ನನ್ನ ಪ್ರಕಾರ ಇವತ್ತು ಅಥವಾ ನಾಳೆ ವರದಿ ಸಲ್ಲಿಸುತ್ತಾರೆ.. ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.







