Tuesday, September 29, 2026

BDA Apartments

Guidelines BDA JK_Adv BDA Adv
Home Front Page ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಬೆಂಗಳೂರು, ಸೆಪ್ಟಂಬರ್, 29,2026 (www.justkannada.in): ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ರಾಜ್ಯ ಆರೋಗ್ಯ ಇಲಾಖೆಯು ಮುಂದಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯುಟಿ ಖಾದರ್, ಅತಿಯಾದ ಉಪ್ಪು ಸೇವನೆ ಒಳ್ಳೆಯದಲ್ಲ. ಉಪ್ಪು ಸೇವನೆ ಕುರಿತು ಮಾರ್ಗಸೂಚಿ ತರಲು ಸಿದ್ಧತೆ ನಡೆಸಿದ್ದೇವೆ ಹೀಗಾಗಿ ನಿಯಮಗಳನ್ನ ಸಾರ್ವಜನಿಕರು ಪಾಲಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ಆರೋಗ್ಯಪೂರಕವಾದ ಉಪ್ಪು ಮಾರುಕಟ್ಟೆಗೆ ಬರಬೇಕು. ಈ ಉದ್ದೇಶದಿಂದ ಉಪ್ಪು ಸೇವನೆ ಬಗ್ಗೆ ಮಾರ್ಗಸೂಚಿ ತರಲು ನಿರ್ಧಾರ ಮಾಡಿದ್ದೇವೆ. ಉಪ್ಪಿನ ದರ ದುಬಾರಿ ಆದರೂ ಚಿಂತೆ ಇಲ್ಲ. ಜನ ಆಗ ಕಡಿಮೆ ಸೇವಿಸ್ತಾರೆ. ಆರೋಗ್ಯಕಪೂರಕವಾಗಿರಬೇಕು, ಎಷ್ಟು ಅಗತ್ಯವೋ ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದರು.Guidelines ut khadar

ಉಪ್ಪನ್ನು ಔಷಧ ರೀತಿಯಲ್ಲಿ ಬಳಸಬೇಕು. ಉಪ್ಪಿನ ಪ್ಯಾಕೆಟ್ ಮೇಲೂ ಅಗತ್ಯಕ್ಕಿಂತ ಉಪ್ಪು ಸೇವನೆ ಮಾಡಿದರೇ ಏನೇನು ಆರೋಗ್ಯ ಸಮಸ್ಯೆ, ರೋಗ ಬರುತ್ತದೆ ಎಂದು ಮುದ್ರಿಸಬೇಕು. ಜನರು, ಆರೋಗ್ಯ ಇಲಾಖೆಯ ನಿಯಮ ಪಾಲಿಸಬೇಕು. ಶಾಲಾ-ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ. ಇದಕ್ಕಾಗಿ ತಜ್ಞರು ಸಂಶೋಧನೆ ಮಾಡಿ, ಮಾಹಿತಿ ಕೊಡಲಿದ್ದಾರೆ. ಆರೋಗ್ಯಕ್ಕೆ ಮಾರಕವಾದ ಯಾವುದೇ ಆಹಾರ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು  ಸಚಿವ ಯುಟಿ ಖಾದರ್ ತಿಳಿಸಿದರು.salt jk02_new jk02 new

 

English Summary
Title

Karnataka Launches Action Plan to Reduce Salt Intake by 30% | Health News

Short Description
Karnataka Health Minister U.T. Khader has launched a strategic action plan to reduce population salt intake by 30% by 2030. Aimed at combating hypertension and cardiovascular diseases, the policy targets sodium reduction across households, restaurants, and packaged foods. Current data shows Indians consume 8–11g of salt daily, far exceeding the WHO recommendation of under 5g. To enforce this, the government is considering health warning labels on salt packets, standardized measuring spoons, and potential legislation to mandate low-sodium alternatives.
Keywords
Guidelines, salt, Minister, U.T. Khader, rules.