ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ. ಎಕೆ-ಡಿಕೆ ಬಾಂಧವ್ಯದಲ್ಲಿ 3 ಲಕ್ಷ ಕೋಟಿ ಗಿಂತ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಅಶೋಕ್ ಖೇಣಿ ಮತ್ತು ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಇಷ್ಟೆಲ್ಲಾ ಅವ್ಯವಹಾರ ಮಾಡಿದ ಅಶೋಕ್ ಖೇಣಿಯನ್ನ ಒದ್ದು ಒಳಗೆ ಹಾಕಬೇಕು. ಯಾರು ಕೂಡ ನೈಸ್ ಟೋಲ್ ಕಟ್ಟಬೇಡಿ ಸರ್ಕಾರ ಅದನ್ನ ಮೊದಲು ನಿಲ್ಲಿಸಲಿ ನೈಸ್ ಯೋಜನೆಗೆ 1 ಲಕ್ಷ 24 ಸಾವಿರ ಕೆರೆ ನೋಟಿಫೈ ಮಾಡಿ ಇಟ್ಟಿದ್ದಾರೆ. 2004ರಲ್ಲೇ ಡಿನೋಟಿಫೈ ಮಾಡಿದ್ದಾರೆ ಇದನ್ನೆಲ್ಲಾ ಹೊಡೆಯಲು ಪ್ಲಾನ್ ಮಾಡಿದ್ದಾರೆ ಎಂದರು.
ನೈಸ್ ಯೋಜನೆ ಅಕ್ರಮದ ಬಗ್ಗೆ ವಿಧಾನಸೌಧದ ಮುಂಭಾಗದಲ್ಲೇ ಚರ್ಚೆಗೆ ಬರಲಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್ ಡಿಕೆ ಪಂಥಾಹ್ವಾನ ನೀಡಿದರು.
ನೈಸ್ ಸಂಸ್ಥೆ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲದಿದ್ದರೆ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮುಂದೆ ಸಿಎಂ ಆಗಿ ಬರುವವರು ಈ ಅಕ್ರಮದ ಬಗ್ಗ ನೋಡಿಕೊಳ್ಳುತ್ತಾರೆ ಎಂದರು.
Key words: NICE Project, Central Minister, HDK challenges, CM DK Shivakumar, debate.






