ಬೆಳಗಾವಿ,ಸೆಪ್ಟಂಬರ್,28,2026 (www.justkannada.in): 2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಖುದ್ದು ಹಾಜರಾಗುವಂತೆ ಸಹಕಾರ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಅವರಿಗೆ ನ್ಯಾಯಾಲಯ ಸಮನ್ಸ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಅಥಣಿಯ 4ನೇ ಜೆಎಂಎಫ್ ಸಿ ಕೋರ್ಟ್ ಅಕ್ಟೋಬರ್ 9 ರಂದು ನ್ಯಾಯಾಲಯಕ್ಕೆ ಖುದ್ದ ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಸಮನ್ಸ್ ನೀಡಿದೆ.
2018ರಲ್ಲಿ ನಡೆದ ಘಟನೆ ಇದಾಗಿದೆ. ತಳವಾರ ಸಮುದಾಯಕ್ಕೆ ಎಷ್ಟು ಅನುದಾನ ನೀಡಿದ್ದೀರಿ? ಎಂದು ಸಚಿವ ಲಕ್ಷ್ಮಣ್ ಸವದಿ ಅವರನ್ನ ರಾಜು ಜಮಖಂಡಿಕರ್ ಎಂಬುವವರು ಪ್ರಶ್ನಿಸಿದ್ದರು. ಇವರ ಮೇಲೆ ಲಕ್ಷ್ಮಣ್ ಸವದಿ ಅವರ ಸಮ್ಮುಖದಲ್ಲೇ ಬೆಂಬಲಿಗರು ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
Key words: Court, summons, Minister, Laxman Savadi






