ಮೈಸೂರು ಸೆಪ್ಟಂಬರ್,25,2026 (www.justkannada.in): ಯುವ ಸಮುದಾಯಗಳ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವ ಸಲುವಾಗಿ ಅ. 4 ರಂದು ಮೈಸೂರಿನಲ್ಲಿ ವಿಶ್ವ ದರ್ಜೆಯ ಇಂಡಿಯನ್ ಪ್ರೀಮಿಯರ್ ಇವೆಂಟ್ ಲೆಟೇಪ್ L’ETAPE ಸೈಕ್ಲಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸೈಕ್ಲಥಾನ್ ಸ್ಪರ್ಧೆ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ ಅವರು ಟೂರ್ ದಿ ಫ್ರಾನ್ಸ್ ಸ್ಪರ್ಧೆಯಿಂದ ಪ್ರೇರೇಪಿತಗೊಂಡು ಸೈಕ್ಲಥಾನ್ ಅನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಸೈಕ್ಲಥಾನ್ ಸ್ಪರ್ಧೆಯಲ್ಲಿ ನಾಲ್ಕು ವಿವಿಧ ವಿಭಾಗಗಳಲ್ಲಿ ಚಟುವಟಿಕೆಗಳು ನಡೆಯಲಿದೆ ಎಂದರು.
100 ಕಿ.ಮೀ ದಾ ರೇಸ್,50 ಕಿ.ಮೀ ದಾ ರೈಡ್, 20 ಕಿ.ಮೀ – ಫ್ಯಾಮಿಲಿ ರೈಡ್ ,1 ಕಿ.ಮೀ – ಮಕ್ಕಳ ಫನ್ ರೇಸ್ ನಂಥಹ 4 ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ ಅವರು ಮಾತನಾಡಿ ದಸರಾ ಸಂದರ್ಭ ಮೈಸೂರಿನಲ್ಲಿ ವಿಶ್ವದರ್ಜೆಯ ಸೈಕ್ಲಥಾನ್ ಸ್ಪರ್ಧೆ ನಡೆಸುತ್ತಿದ್ದು, ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸುರಕ್ಷಿತ ಕ್ರಮಗಳನ್ನು ಗಮನಿಸಿ ಅಚ್ಚುಕಟ್ಟಾಗಿ ಸೈಕ್ಲಥಾನ್ ಸ್ಪರ್ಧೆಯನ್ನು ನಡೆಸಿಕೊಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದರು.
ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಮಾತನಾಡಿ ಸಂಚಾರ ವ್ಯವಸ್ಥೆಗಳಲ್ಲಿ ಅಡ್ಡಿ ಆಗದಂತೆ ಹಾಗೂ ಆರೋಗ್ಯ ಸುರಕ್ಷತೆಗಳನ್ನು ಗಮನಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್,ಉಪ ವಿಭಾಗಾಧಿಕಾರಿ ಆಶಪ್ಪ .ಕೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Key words: ‘L’Etape’ premier cyclathon, event, October 4, M.N. Anucheth






