Sunday, August 9, 2026

BDA Apartments

Home Front Page ಸೋಮಾರಿ ಅಧಿಕಾರಿಗಳು ಇರೋದು ಬೇಡ: ನಿನ್ನನ್ನ ನನ್ನ ಕಚೇರಿಗೆ  ಹಾಕ್ತೀನಿ-ಸಚಿವ ವಿ.ಸೋಮಣ್ಣ ಕ್ಲಾಸ್….

ಸೋಮಾರಿ ಅಧಿಕಾರಿಗಳು ಇರೋದು ಬೇಡ: ನಿನ್ನನ್ನ ನನ್ನ ಕಚೇರಿಗೆ  ಹಾಕ್ತೀನಿ-ಸಚಿವ ವಿ.ಸೋಮಣ್ಣ ಕ್ಲಾಸ್….

ಗದಗ,ನ,7,2019(www.justkannada.in):  ಹೋದ ಕಡೆಯಲೆಲ್ಲಾ ವಸತಿ ಸಚಿವ ವಿ.ಸೋಮಣ್ಣ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಬಿಸಿಮುಟ್ಟಿಸುತ್ತಾರೆ. ಅಂತೆಯೇ ಇಂದು ಸಹ  ಗದಗದಲ್ಲಿ ವಸತಿ ಯೋಜನೆ ಮನೆ ನಿರ್ಮಾಣದಲ್ಲಿ  ನಿರ್ಲಕ್ಷ್ಯ ವಹಿಸಿದ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಕಂಡು ಬಂತು.

ಹೌದು.. ವಸತಿ ಸಚಿವ ವಿ ಸೋಮಣ್ಣ ಗದಗ ಜಿಲ್ಲಾ ಪಂಚಾಯ್ತಿಯ ಕಚೇರಿಯಲ್ಲಿ ಕೊಳಚೆ ನಿರ್ಮಾಲನ ಮಂಡಳಿಯಲ್ಲಿನ ಅಧಿಕಾರಿ ಆನಂದಪ್ಪ ಎನ್ನುವವರಿಗೆ ಕ್ಲಾಸ್ ತೆಗೆದುಕೊಂಡು ಬಿಸಿ ಮುಟ್ಟಿಸಿದರು. ಕೊಳಚೆ ನಿರ್ಮೂಲನ ಮಂಡಳಿಯಿಂದ ನೆರೆ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ, ವಸತಿ ಯೋಜನೆಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆ ಅಧಿಕಾರಿ ಆನಂದಪ್ಪರಿಗೆ ತರಾಟೆ ತೆಗೆದುಕೊಂಡರು.

ಹೇ ನೋಡಪ್ಪ ಬಾಲರಾಜ್, ಇವರನ್ನು ತೆಗೆದು ಬೇರೆಯವರನ್ನು ಹಾಕ್ರಿ…. ಇವರು ಯಾರೋ ಸೋಂಬೇರಿ ಪುಟ್ಟ ಅಂತ ಕಾಣಿಸುತ್ತದೆ.  ಸೋಮಾರಿಗಳು ಇರೋದು ಬೇಡ. ತೆಗೆದಿದ್ದೇ ನಮ್ಮ ಆಫೀಸ್ ಗೆ ಬೆಂಗಳೂರಿಗೆ ಹಾಕಿ..ನಿನ್ನನ್ನ ನನ್ನ ಕಚೇರಿಗೆ ಹಾಕ್ತೀನಿ. ಪ್ರೋಜೆಕ್ಟ್ ಕೆಲಸ ಕೊಡುತ್ತೇನೆ. ಅಲ್ಲಿ ಹೇಗ್ ಮಾಡ್ತೀಯೋ ನೋಡುತ್ತೇನೆ.  ಎಂದು ವಸತಿ ಸಚಿವ ವಿ ಸೋಮಣ್ಣ ಅಧಿಕಾರಿ ಆನಂದಪ್ಪಗೆ ಕ್ಲಾಸ್ ತೆಗೆದುಕೊಂಡರು.

ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿ ಆನಂದಪ್ಪ ಎನ್ನುವವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರಿಂದ ದೂರು ಬಂದಿತ್ತು ಎನ್ನಲಾಗಿದೆ.

Key words: gadag- lazy officers-my office-Minister- v. Somanna -class