Wednesday, August 5, 2026

BDA Apartments

Home Front Page ಅನುದಾನ ಬಿಡುಗಡೆ ಮಾಡುವಂತೆ ಸಚಿವ ಮಾಧುಸ್ವಾಮಿಗೆ ಕೈ ಮುಗಿದು ಗದ್ಗದಿತರಾಗಿ ಮನವಿ ಮಾಡಿದ ಕೈ ಶಾಸಕ…

ಅನುದಾನ ಬಿಡುಗಡೆ ಮಾಡುವಂತೆ ಸಚಿವ ಮಾಧುಸ್ವಾಮಿಗೆ ಕೈ ಮುಗಿದು ಗದ್ಗದಿತರಾಗಿ ಮನವಿ ಮಾಡಿದ ಕೈ ಶಾಸಕ…

ತುಮಕೂರು,ನ,7,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರ ತಡೆ ಹಿಡಿದಿದ್ದ ಅನುದಾನವನ್ನ ಬಿಡುಗಡೆ ಮಾಡುವಂತೆ ಕಾನೂನು ಸಚಿವ ಮಾಧುಸ್ವಾಮಿಗೆ  ಕಾಂಗ್ರೆಸ್ ಶಾಸಕ ಕೈಮುಗಿದು  ಮನವಿ ಮಾಡಿದ ಘಟನೆ ನಡೆಯಿತು.

ತುಮಕೂರಿನ ಕುಣಿಗಲ್ ನಲ್ಲಿ ನಡೆದ ಸಭೆಯಲ್ಲಿ ಶಾಸಕ ರಂಗನಾಥ್  ಸಚಿವ ಮಾಧುಸ್ವಾಮಿಗೆ ಮನವಿ ಮಾಡಿದ್ದಾರೆ. ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ 14 ಕೋಟಿ ಅನುದಾನವನ್ನ ರಾಜ್ಯ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಹೀಗಾಗಿ ಅನುದಾನವನ್ನ ಬಿಡುಗಡೆ ಮಾಡುವಂತೆ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಬಳಿ ಕೈ ಮುಗಿದು ಗದ್ಗದಿತರಾಗಿ ಶಾಸಕ ರಂಗನಾತ್ ಮನವಿ ಮಾಡಿದರು.

ಅನುದಾನ ಹಿಂಪಡೆದ ಬಗ್ಗೆ ಮನವರಿಕೆ ಮಾಡಿಕೊಟ್ಟ ಶಾಸಕ ರಂಗನಾಥ್ ಗೆ ಅನುದಾನವನ್ನ ಬಿಡುಗಡೆ ಮಾಡಿಸಿಕೊಡುವುದಾಗಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದರು.

Key words: tumkur- congress- MLA- appealed –Minister- Madhuswamy – release -grant.