Saturday, September 19, 2026

BDA Apartments

Semicon India-2026 Conference BDA JK_Adv BDA Adv
Home Front Page ಸೆಮಿಕಾನ್ ಇಂಡಿಯಾ-2026 ಸಮಾವೇಶ: ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು ನಿಚ್ಚಳ- ಸಚಿವ...

ಸೆಮಿಕಾನ್ ಇಂಡಿಯಾ-2026 ಸಮಾವೇಶ: ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು ನಿಚ್ಚಳ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್‌,19,2026 (www.justkannada.in): ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ 20ಕ್ಕೂ ಹೆಚ್ಚು ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ₹15 ಸಾವಿರ ಕೋಟಿಗೂ ಹೆಚ್ಚಿನ ಬಂಡವಾಳ ಹರಿದು ಬರುವ ಸಾಧ್ಯತೆ ನಿಚ್ಚಳವಾಗಿದೆ. ಈ ಅವಕಾಶವನ್ನು ನಮ್ಮದಾಗಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಎರಡು ದಿನಗಳ ಸೆಮಿಕಾನ್ ಇಂಡಿಯಾ ಸಮಾವೇಶಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿದ್ದ ಅವರು, ದೆಹಲಿಯಿಂದ ವಾಪಸ್ ಆದ ಬಳಿಕ ಶನಿವಾರ‌ ಸಚಿವ ಎಂ.ಬಿ ಪಾಟೀಲ್ ಈ ವಿವರ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಲ್ಯಾಮ್ ರೀಸರ್ಚ್ ಕಂಪನಿಯು ರಾಜ್ಯದಲ್ಲಿ ₹9,298 ಕೋಟಿ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ 10 ವರ್ಷಗಳಲ್ಲಿ ಮೊದಲ ಹಂತದಲ್ಲಿ ₹3,600 ಕೋಟಿ ಬಂಡವಾಳ ಹೂಡುವುದಾಗಿ ಘೋಷಿಸಿವೆ. ಈ ಎರಡೂ ಯೋಜನೆಗಳಿಂದ ರಾಜ್ಯದ ಸೆಮಿಕಂಡಕ್ಟರ್ ಪೂರೈಕೆ ಸರಪಳಿ, ಚಿಪ್ ವಿನ್ಯಾಸ ಮತ್ತು ಈ ಕ್ಷೇತ್ರದ ಸಾಧನಗಳ ತಯಾರಿಕೆ, ಪ್ರಿಸಿಷನ್ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ಇವುಗಳ ಚಿತ್ರಣವೇ ಬದಲಾಗಲಿದೆ ಎಂದಿದ್ದಾರೆ.

ಲ್ಯಾಮ್ ರೀಸರ್ಚ್ ಕಂಪನಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 73 ಎಕರೆ ಭೂಮಿ ನೀಡಲಾಗಿದೆ. ಇಲ್ಲಿ ದೇಶದ ಪ್ರಪ್ರಥಮ ಸಿಲಿಕಾನ್ ಬಿಡಿಭಾಗಗಳ ತಯಾರಿಕಾ ಸ್ಥಾವರ ಬರಲಿದ್ದು, 1,000ಕ್ಕೂ ಹೆಚ್ಚು ನೇರ ಹೈಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ರಾಜ್ಯದಲ್ಲಿ ಇದರಿಂದ ಉನ್ನತ ಮಟ್ಟದ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಮತ್ತು ಬಿಡಿಭಾಗಗಳ ತಯಾರಿಕೆ ಕೂಡ ಆರಂಭವಾಗಲಿದೆ. ಈ ಘಟಕ ನಿರ್ಮಾಣಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಒಂದೂವರೆ ವರ್ಷದಲ್ಲಿ ಅದು ಕಾರ್ಯಾರಂಭ ಮಾಡುವ ವಿಶ್ವಾಸ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.Semicon India-2026 Conference ಎಂಬಿ ಪಾಟೀಲ್‌

ಇದೇ ರೀತಿಯಲ್ಲಿ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಎಂಜಿನಿಯರಿಂಗ್ ಮತ್ತು ಈ ಕ್ಷೇತಕ್ಕೆ ಅಗತ್ಯವಿರುವ ಸಾಧನಗಳ ತಯಾರಿಕೆಗೆ ಹೆಸರಾಗಿರುವ ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು 2035ರ ವೇಳೆಗೆ ಭಾರತದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕಂಪನಿಯು ತನ್ನ ದೀರ್ಘಾವಧಿ ಚಟುವಟಿಕೆಗಳ ವಿಸ್ತರಣೆಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಇದರಂತೆ, ಇನ್ನು 10 ವರ್ಷಗಳಲ್ಲಿ ಅದು ರಾಜ್ಯದಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಲಿದೆ. ಇದಕ್ಕಾಗಿ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಕಂಪನಿಗೆ 140 ಎಕರೆ ಭೂಮಿ ನೀಡಲಾಗುತ್ತಿದೆ. ಇದರಿಂದಲೂ 1,000ಕ್ಕೂ ಹೆಚ್ಚು ಗುಣಮಟ್ಟದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಂ.ಬಿ ಪಾಟೀಲ್ ನುಡಿದಿದ್ದಾರೆ.

ಈ ಹೂಡಿಕೆಯಿಂದ ಭಾರತೀಯ ಪೂರೈಕೆದಾರರು, ಎಂಜಿನಿಯರಿಂಗ್ ಕಂಪನಿಗಳು, ತಾಂತ್ರಿಕ ಸಹಭಾಗಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸೆಮಿಕಂಡಕ್ಟರ್ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಅಪ್ಲೈಡ್ ಮೆಟೀರಿಯಲ್ಸ್ ತಯಾರಿಕಾ ಘಟಕಕ್ಕೂ ಇನ್ನು ಕೆಲವೇ ತಿಂಗಳುಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ತಾವು ನೆದರ್ಲೆಂಡ್ಸ್ ದೇಶದ ನೆಕ್ಸ್ಪೀರಿಯಾ, ಜಪಾನಿನ ಟೋಕಿಯೋ ಎಲೆಕ್ಟ್ರಾನಿಕ್ಸ್ ಮತ್ತು ಫ್ಯೂಜಿ ಫಿಲಂ, ಸಿಮ್ರಾ ಎಸ್.ಜಿ.ಎಸ್, ಎಟಿ ಅಂಡ್ ಎಸ್, ಸಿ.ಜಿ.ಸೆಮಿ, ಎರಿಕ್ಸನ್ ಮುಂತಾದ ಕಂಪನಿಗಳೊಂದಿಗೂ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಮತ್ತು ತಯಾರಿಕಾ ಚಟುವಟಿಕೆ ಆರಂಭಿಸುವಂತೆ ಕೋರಿರುವುದಾಗಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.‌000 crore jk02_new jk02 new

 

English Summary
Title

₹15,000 crore investment inflow into State to create 2,000+ jobs: M. B. Patil

Short Description
Talks held with more than 20 companies at SEMICON India 2026 Bengaluru: Discussions were held with more than 20 companies at the SEMICON India 2026 conference held in Delhi, raising the prospects of more than ₹15,000 crore in investment flowing into the State. All necessary measures will be taken expeditiously to capitalise on these opportunities, said Minister for Large and Medium Industries M. B. Patil on Saturday. He shared these details after returning from Delhi, where he attended the two-day SEMICON India conference as part of a high-level delegation. Speaking about the outcome of the visit, he stated, while Lam Research announced an investment of ₹9,298 crore in the State, Applied Materials shared plans of an investment of ₹3,600 crore over the next 10 years. These two projects will significantly transform Karnataka’s semiconductor supply chain, chip design and semiconductor equipment manufacturing, precision engineering, research and development capabilities, he added.
Keywords
Semicon India-2026 Conference, ₹15, 000 crore, investment, Minister, M.B. Patil