Saturday, September 19, 2026

BDA Apartments

Invitation BDA JK_Adv BDA Adv
Home Front Page ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

ಮೈಸೂರು,ಸೆಪ್ಟಂಬರ್‌,19,2026 (www.justkannada.in) : ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, NASI Distinguished Chair Professor ಹಾಗೂ ಹೋಕೈಡೊ ವಿಶ್ವವಿದ್ಯಾಲಯದ ಅಂಬಾಸಡರ್ ಪ್ರೊ. ಕಂಚುಗಾರಕೊಪ್ಪಲು ಎಸ್. ರಂಗಪ್ಪ ಅವರನ್ನು ಜಪಾನ್‌ನ ಪ್ರತಿಷ್ಠಿತ ಕ್ಯೋಟೋ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಸಹಯೋಗಕ್ಕಾಗಿ ಆಹ್ವಾನಿಸಲಾಗಿದೆ.

ಕ್ಯೋಟೋ ವಿಶ್ವವಿದ್ಯಾಲಯದ WPI-iCeMS ಸಂಸ್ಥೆಯ ನಿರ್ದೇಶಕ ಡಾ. ನಮಸಿವಾಯಂ ಗಣೇಶ್ ಪಾಂಡಿಯನ್ ಅವರು ಆಹ್ವಾನ ನೀಡಿದ್ದು, IN-CBI On-site Laboratory ಮೂಲಕ ಭಾರತ–ಜಪಾನ್ ಜಂಟಿ ಸಂಶೋಧನೆ, ವಿಜ್ಞಾನಿಗಳ ಮತ್ತು ವಿದ್ಯಾರ್ಥಿಗಳ ವಿನಿಮಯ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.Invitation rangappal

ಇದರ ಜೊತೆಗೆ, ಸೆಪ್ಟೆಂಬರ್ 26ರಂದು ಹೋಕೈಡೊ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 150ನೇ ವರ್ಷದ Global Ambassadors Meet ಕಾರ್ಯಕ್ರಮದಲ್ಲಿ ಪ್ರೊ. ಎಸ್. ರಂಗಪ್ಪ ಅವರು Guest of Honor ಆಗಿ ಭಾಗವಹಿಸಲಿದ್ದಾರೆ.Prof. S. Rangappa Rangappa

ಮುಂದುವರಿದು, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೆ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಭೆಗಳು ಹಾಗೂ ಸೆಮಿನಾರ್‌ಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ಏಪ್ರಿಲ್ 12–14, 2027ರಂದು ಕ್ಯೋಟೋದಲ್ಲಿ ನಡೆಯಲಿರುವ PROMEDICON 2027 ಸಮ್ಮೇಳನದ ಸಹ-ಆಯೋಜನೆ ಸೇರಿದಂತೆ ಮುಂದಿನ ಭಾರತ–ಜಪಾನ್ ಸಂಶೋಧನಾ ಸಹಯೋಗದ ಕುರಿತು ಚರ್ಚೆ ನಡೆಯಲಿದೆ.

research collaboration jk02_new jk02 new

English Summary
Title

Kyoto University Invites Prof. K.S. Rangappa as JSPS Visiting Professor

Short Description
Kyoto University has formally extended a prestigious academic invitation to Prof. K.S. Rangappa, the distinguished former Vice-Chancellor of the University of Mysore. A pioneer in chemical biology and cancer drug discovery, Prof. Rangappa will serve as a Visiting Professor under the prestigious Japan Society for the Promotion of Science (JSPS) fellowship program. During this international research collaboration, he will deliver expert lectures, guide postgraduate scholars, and spearhead advanced research initiatives in organic synthesis at Kyoto University's chemistry department, further bridging Indo-Japan scientific partnerships.
Keywords
Invitation, Prof. S. Rangappa, research collaboration, Kyoto University