ಮೈಸೂರು,ಸೆಪ್ಟಂಬರ್,18,2026 (www.justkannada.in): ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಹೇಳಿಕೆ ವಿರೋಧಿಸಿ ಬಿಜೆಪಿ ಶೋಭಾಯಾತ್ರೆ ಹಮ್ಮಿಕೊಂಡಿದ್ದು ಇದಕ್ಕೆ ಕೌಂಟರ್ ಆಗಿ ಸೌಹಾರ್ದತೆ ಕಡೆಗೆ ಸಾಮರಸ್ಯದ ನಡಿಗೆ ನಡೆಯುತ್ತಿದೆ.
ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಟಿ.ನರಸೀಪುರದಲ್ಲಿ ಸೌಹಾರ್ದತೆ ಕಡೆಗೆ ಸಾಮರಸ್ಯದ ನಡಿಗೆ ಎಂಬ ಯಾತ್ರೆಯನ್ನ ನಡೆಸಲಾಗುತ್ತಿದ್ದು ಬೋಧೀರತ್ನ ಬಂತೇಜಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಪಟ್ಟಣದ ಭಗವಾನ್ ಟಾಕೀಸ್ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿದ್ದು, ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಯಿತು. ಈ ನಡಿಗೆಯಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದ್ದಾರೆ. ಇಂದು ಟಿ.ನರಸೀಪುರದಲ್ಲಿ ಎರಡು ಯಾತ್ರೆಗಳು ನಡೆಯುತ್ತಿರುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎರಡು ಯಾತ್ರೆಗಳು ಹಿನ್ನೆಲೆ ಪೊಲೀಸ್ ಭದ್ರೆತೆ ಕೈಗೊಳ್ಳಲಾಗಿದೆ. ಅನಗತ್ಯ ಗೊಂದಲ ಸೃಷ್ಠಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.






