Thursday, September 17, 2026

BDA Apartments

CHESCOM officer BDA JK_Adv BDA Adv
Home Front Page ಅಪಘಾತಕ್ಕೀಡಾದ ನರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಚೆಸ್ಕಾಂ ಅಧಿಕಾರಿ..

ಅಪಘಾತಕ್ಕೀಡಾದ ನರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಚೆಸ್ಕಾಂ ಅಧಿಕಾರಿ..

ಮೈಸೂರು,ಸೆಪ್ಟಂಬರ್,17,2026 (www.justkannada.in):  ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವು-ನೋವಿನ ನಡುವೆ ನರಳುತ್ತಿದ್ದ ಅಳಿವಿನಂಚಿನಲ್ಲಿರುವ ವನ್ಯಜೀವಿ ನರಿಯೊಂದನ್ನು ರಕ್ಷಿಸಲು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಕುಮಾರ್ ಸಿ. ಅವರು ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ಹುಣಸೂರಿನತ್ತ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ಹುಣಸೂರು–ಪಿರಿಯಾಪಟ್ಟಣ ಮಾರ್ಗದ ಅರಸು ಕಲ್ಲಹಳ್ಳಿ ರಸ್ತೆಯಲ್ಲಿ ನರಿ ವಾಹನಕ್ಕೆ ಸಿಲುಕಿ ಗಾಯಗೊಂಡಿರುವುದನ್ನು ಕುಮಾರ್ ಅವರು ಗಮನಿಸಿದ್ದಾರೆ.CHESCOM officer humanity.jpg1

ರಸ್ತೆಯ ಮಧ್ಯಭಾಗದಲ್ಲಿ ನೋವಿನಿಂದ ನರಳುತ್ತಿದ್ದ ನರಿಯನ್ನು ಕಂಡ ಅವರು, ಕ್ಷಣವೂ ತಡಮಾಡದೆ ವಾಹನ ನಿಲ್ಲಿಸಿ ಯಾವುದೇ ಭಯವಿಲ್ಲದೆ ತಮ್ಮ ಕೈಯಲ್ಲೇ ನರಿಯನ್ನು ಎತ್ತಿಕೊಂಡು ರಸ್ತೆ ಬದಿಗೆ ಸುರಕ್ಷಿತವಾಗಿ ಇರಿಸಿದ್ದಾರೆ.

ಬಳಿಕ ಹುಣಸೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಉದಯ್ ಕುಮಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಬರುವವರೆಗೂ ಸುಮಾರು ಒಂದು ಗಂಟೆ ಸ್ಥಳದಲ್ಲೇ ಕಾದು, ಗಾಯಗೊಂಡ ವನ್ಯಜೀವಿಯನ್ನು ಅವರ ವಶಕ್ಕೆ ಒಪ್ಪಿಸಿದ ಬಳಿಕ ಕುಮಾರ್ ಅವರು ಅಲ್ಲಿಂದ ತೆರಳಿದ್ದಾರೆ.humanity

ಇಂದು ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗಾಯಗೊಂಡ ವನ್ಯಜೀವಿಯೊಂದರ ಜೀವ ಉಳಿಸಲು ಅಧಿಕಾರಿಯೊಬ್ಬರು ತೋರಿದ ಈ ಕಾಳಜಿ ಗಮನ ಸೆಳೆದಿದೆ.

ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲ, ಮೂಕ ಜೀವಿಯ ನೋವಿಗೂ ಸ್ಪಂದಿಸುವ ಹೃದಯವಂತಿಕೆ ಸಮಾಜಕ್ಕೆ ಅಗತ್ಯ. ಕುಮಾರ್ ಸಿ. ಅವರ ಈ ಮಾನವೀಯ ನಡೆ ನಿಜಕ್ಕೂ ಶ್ಲಾಘನೀಯವಾಗಿದ್ದು, ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.rescuing jk02_new jk02 new

ಮೂಕ ಜೀವಿಯ ನೋವಿಗೆ ಮಿಡಿದ ಅಧಿಕಾರಿ… ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

Key words: CHESCOM officer, humanity, rescuing, injured fox.

English Summary
Title

Inspiring Coexistence: CHESCOM Officer Rescues Injured Fox in Mysuru

Short Description
A heartwarming act of humanity unfolded in Mysuru as a CHESCOM officer went above and beyond to rescue a severely injured fox. Ground-level utility workers and linemen frequently encounter displaced wildlife near active habitats like Kukkarahalli Lake. Demonstrating a profound respect for nature and coexistence, the officer’s compassionate quick thinking ensured the distressed animal was safely secured without further harm. For local animal rescue, residents are urged to avoid direct contact with wild animals and immediately notify the Karnataka Forest Department or People For Animals (PFA) Mysuru to ensure professional medical rehabilitation.
Keywords
CHESCOM officer, humanity, rescuing, injured fox.