Wednesday, September 16, 2026

BDA Apartments

Karnataka Fuel Fraud Minister Rizwan BDA JK_Adv BDA Adv
Home Front Page ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ: 101 ಬಂಕ್‌ ಗಳ ವಿರುದ್ಧ ಕೇಸ್-ಸಚಿವ ರಿಜ್ವಾನ್ ಅರ್ಷಾದ್

ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ: 101 ಬಂಕ್‌ ಗಳ ವಿರುದ್ಧ ಕೇಸ್-ಸಚಿವ ರಿಜ್ವಾನ್ ಅರ್ಷಾದ್

ಬೆಂಗಳೂರು, ಸೆಪ್ಟೆಂಬರ್, 16,2026 (www.justkannada.in): ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆಯಲ್ಲಿ ಲೋಪವೆಸಗುತ್ತಿರುವುದು ಕಂಡು ಬಂದಿದ್ದು ಈ ಮಧ್ಯೆ  101 ಬಂಕ್‌ ಗಳ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಜ್ವಾನ್ ಅರ್ಷಾದ್,  ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್‌ ಗಳಿದ್ದು, ಕಳೆದ ಒಂದು ವಾರದಲ್ಲಿ ಇಲಾಖೆಯ ಅಧಿಕಾರಿಗಳು 805 ಬಂಕ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 768 ಬಂಕ್‌ಗಳಲ್ಲಿ ಅಳತೆ ವ್ಯತ್ಯಯ ಕಂಡುಬಂದಿದೆ., 101 ಬಂಕ್‌ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೆಟ್ರೋಲ್ ಬಂಕ್‌ ಗಳ ಕ್ಯಾಲಿಬರೇಷನ್ ಹಾಗೂ ಪರಿಶೀಲನೆಯ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಿ, ಅದನ್ನು ಡಿಸ್ಪ್ಲೇ ಮೂಲಕ ಸಾರ್ವಜನಿಕರ ಗಮನಕ್ಕೆ ತರುವಂತೆ ಸೂಚಿಸಲಾಗುವುದು ಎಂದರು.Karnataka Fuel Fraud Minister Rizwan petrol

ಪೆಟ್ರೋಲ್ ಬಂಕ್‌ಗಳ ಮಾಲೀಕರು ಪ್ರತಿದಿನ ಪೆಟ್ರೋಲ್ ಗನ್‌ ಗಳ ಅಳತೆಯನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗುವುದು. ಗ್ರಾಹಕರಿಗೆ ಅಳತೆಯ ಬಗ್ಗೆ ಅನುಮಾನ ಬಂದರೆ, ನಿಗದಿತ ಮಾಪಕಗಳ ಮೂಲಕ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಬಂಕ್‌ಗಳಲ್ಲಿ ಸೂಕ್ತ ಶುಚಿತ್ವ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆಯೂ ಸೂಚನೆ ನೀಡಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ jk02_new jk02 new

ಪೆಟ್ರೋಲ್ ಬಂಕ್‌ ಗಳಲ್ಲಿ ಅಳತೆ, ಗುಣಮಟ್ಟ, ಶುಚಿತ್ವ ಅಥವಾ ಇತರ ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು 18005991100 ಟೋಲ್‌ಫ್ರೀ ಸಂಖ್ಯೆಗೆ ದೂರು ನೀಡುವಂತೆ ಸಚಿವ ರಿಜ್ವಾನ್ ಅರ್ಷಾದ್  ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ ಅಧಿಸೂಚನೆಗಳಿಗೆ ಸಚಿವರಿಂದ ಆಕ್ಷೇಪ

ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ಗೆ ಸಂಬಂಧಿಸಿದ ಎರಡು ಅಧಿಸೂಚನೆಗಳಿಗೆ ರಾಜ್ಯ ಸರ್ಕಾರದ ಆಕ್ಷೇಪವಿದೆ. ಈ ಹಿಂದೆ ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡಿಸಬೇಕಿದ್ದ ನಿಯಮವನ್ನು ಎರಡು ವರ್ಷಕ್ಕೊಮ್ಮೆ ಮಾಡುವಂತೆ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಪೆಟ್ರೋಲ್ ಗನ್‌ ಗಳ ಕ್ಯಾಲಿಬರೇಷನ್‌ ಅನ್ನು ಖಾಸಗಿಯವರು ಮಾಡಬಹುದು ಎಂಬ ಮತ್ತೊಂದು ಅಧಿಸೂಚನೆಯೂ ಬಂದಿದೆ. ಖಾಸಗಿಯವರು ಕ್ಯಾಲಿಬರೇಷನ್ ಮಾಡಿದರೆ ಅದರ ವಿಶ್ವಾಸಾರ್ಹತೆ ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಇದೆ ಎಂದು ಸಚಿವ ರಿಜ್ವಾನ್ ಅರ್ಷಾದ್ ಆಕ್ಷೇಪಿಸಿದರು.

Key words: Discrepancies, measurement, petrol bunks, Cases, Minister, Rizwan Arshad

English Summary
Title

Karnataka Fuel Fraud: Minister Rizwan Arshad Rejects Center's Calibration Policy

Short Description
Karnataka Food and Civil Supplies Minister Rizwan Arshad has rejected the Central Government's fuel pump recalibration policy after a massive crackdown revealed widespread short-delivery. Out of 805 petrol bunks inspected, 768 required recalibration, and 2,618 nozzles were found under-delivering fuel. Legal action was taken against 101 stations. The Center's new policy extends the mandatory calibration window from 12 to 24 months, which Arshad argues exposes consumers to rampant fraud. Karnataka will stick to annual checks, launch a public transparency dashboard for its 5,946 stations, and finish all pump verifications.