ನವದೆಹಲಿ,ಸೆಪ್ಟಂಬರ್,16,2026 (www.justkannada.in): ದೇಶದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇಪಿಎಫ್ ಒ(EPFO) ವೇತನ ಮಿತಿಯನ್ನು ಪರಿಷ್ಕರಿಸಿದೆ.
ಇಪಿಎಫ್ ಒ ವೇತನ ಮಿತಿಯನ್ನು 25,000 ರೂ.ಗೆ ಹೆಚ್ಚಳ ಮಾಡಿದೆ. ಕೇಂದ್ರ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದುಮ ಈ ನಿರ್ಧಾರದಿಂದಾಗಿ ಸುಮಾರು 51 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಿಗಳು ಇಪಿಎಫ್ ಒ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
2014ರಲ್ಲಿ ವೇತನ ಮಿತಿಯನ್ನು 15,000 ರೂ.ಗೆ ಏರಿಸಲಾಗಿತ್ತು. ಈ ಯೋಜನೆ ಜಾರಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ₹11,339 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.







