Wednesday, September 16, 2026

BDA Apartments

Protest BDA JK_Adv BDA Adv
Home Front Page MDCC ಬ್ಯಾಂಕ್ ವಿರುದ್ದ ಪ್ರತಿಭಟನೆ: ಶಾಸಕರ ಮುಂದೆಯೇ ವಿಷ ಕುಡಿಯಲು ಯತ್ನಿಸಿದ ರೈತ

MDCC ಬ್ಯಾಂಕ್ ವಿರುದ್ದ ಪ್ರತಿಭಟನೆ: ಶಾಸಕರ ಮುಂದೆಯೇ ವಿಷ ಕುಡಿಯಲು ಯತ್ನಿಸಿದ ರೈತ

ಮೈಸೂರು,ಸೆಪ್ಟಂಬರ್,16,2026 (www.justkannada.in): ಸಾಲ ನೀಡದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ  ಎಂಡಿಸಿಸಿ ಬ್ಯಾಂಕ್ ಕಾರ್ಯವೈಖರಿ ವಿರುದ್ದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಎಂಡಿಸಿಸಿ ಬ್ಯಾಂಕ್ ಮುಂದೆ ಪಿರಿಯಾಪಟ್ಟಣ- ಹುಣಸೂರು ರೈತರು  ಪ್ರತಿಭಟನೆ ನಡೆಸಿದ್ದು, ಧರಣಿಯಲ್ಲಿ ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ, ಮಾಜಿ ಶಾಸಕ ಕೆ. ಮಹದೇವ್, ಮೈಮೂಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿ ಹಲವರು ಭಾಗಿಯಾಗಿದ್ದರು.Protest farmer farmer 1

ಸಾಲ ನೀಡದ ಎಂಡಿಸಿಸಿ ಬ್ಯಾಂಕ್ ಕಾರ್ಯವೈಖರಿಗೆ ಬೇಸತ್ತು ರೈತರೊಬ್ಬರು ಶಾಸಕ ಜಿಡಿ ಹರೀಶ್ ಗೌಡ ಮುಂದೆಯೇ ವಿಷ ಕುಡಿಯಲು ಯತ್ನಿಸಿದ ಘಟನೆ ನಡೆಯಿತು. ಪಿರಿಯಾಪಟ್ಟಣ ಭಾಗದ ರೈತರಿಗೆ  ಎಂಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿಲ್ಲ. ಸಹಕಾರ ನೀಡಬೇಕಾದ ಬ್ಯಾಂಕ್ ಪಿರಿಯಾಪಟ್ಟಣದ ಶಾಸಕರ ಕೈ ಗೊಂಬೆಯಾಗಿದೆ. ಕಾಲ ಕಾಲಕ್ಕೆ ಸಾಲ ಮರುಪಾವತಿ ಮಾಡಿದರೂ ನಮಗೆ ಸಾಲ ಕೊಡುತ್ತಿಲ್ಲ. ತಾಳಿ ಮಾರಿ ನಾವು ಸಾಲ ಕಟ್ಟಿದ್ದೀವಿ. ನಾವು ಬ್ಯಾಂಕ್ ಸಾಲವನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಈಗ ಸಾಲ ನೀಡದೇ ಬ್ಯಾಂಕ್ ಸಿಬ್ಬಂದಿಗಳು ಆಟ ಆಡಿಸುತ್ತಿದ್ದಾರೆ. ನಮಗೆ ಸಾಲ ನೀಡದೇ ಹೋದರೆ ವಿಷ ಕುಡಿದು ಸಾಯುತ್ತೇವೆ ಎಂದು ಪ್ರತಿಭಟನೆಯಲ್ಲಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.against jk02_new jk02 new

 

English Summary
Title

Protest against Mysuru MDCC Bank : Hunsur MLA Leads Farmers Against Agri Loan Denials

Short Description
Led by Hunsur MLA G.D. Harish Gowda, local farmers staged a massive Mysuru farmers protest outside the Mysuru Chamarajanagar District Co-operative Central (MCDCC) Bank. The agitation targets the unfair denial of fresh agricultural credit and crop loans to eligible farmers who have already cleared past dues. Protesters are demanding transparency, condemning administrative corruption, bribery, and political discrimination within cooperative societies. Agriculture groups call for urgent government intervention to ensure fair loan disbursement
Keywords
Protest, against, MDCC Bank, Farmers., Mysore