ಮೈಸೂರು,ಸೆಪ್ಟಂಬರ್,16,2026 (www.justkannada.in) : ಟಿ.ನರಸೀಪುರ ಇನ್ಸ್ ಪೆಕ್ಟರ್ ಆಡಿರುವ ಮಾತಿಗೆ ನಾವು ಪ್ರತಿಭಟನೆ ಮಾಡಿದ್ದೇವೆ. ಬಿಜೆಪಿ ಮುಸಲ್ಮಾನರ ವಿರೋಧಿ ಅಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಮಸೀದಿ ಮುಂದೆ ಮೆರವಣಿಗೆ ಮಾಡಬಾರದೆಂಬ ಹೇಳಿಕೆಗೆ ಪ್ರತಿಭಟನೆ ಮಾಡಿದ್ದೇವೆ. ಟಿ.ನರಸೀಪುರ ಇನ್ಸ್ ಪೆಕ್ಟರ್ ಮಾತುಗಳಿಗೆ ನಮ್ಮ ವಿರೋಧವಿದೆ ಆ ಕಾರಣಕ್ಕೆ ನಾವು ಪ್ರತಿಭಟನೆ ಮಾಡಿದ್ದೇವೆ ಮುಸಲ್ಮಾನರನ್ನ ಗುರಿಯಾಗಿಸಿಕೊಂಡು ಪ್ರತಿಭಟನೆ ಮಾಡಿಲ್ಲ. ಬಿಜೆಪಿ ಮುಸಲ್ಮಾನರ ವಿರೋಧಿ ಅಲ್ಲ ಎಂದರು.
ಪ್ರತಿಭಟನೆ ವೇಳೆ ಚಪ್ಪಲಿ ಶೂ ಧರಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳಿಗೆ ಗೌರವದ ಪ್ರತೀತಿ ಇದೆ. ನಾವು ಕೈಯಲ್ಲಿ ಹಿಡಿದಿದ್ದ ಮೂರ್ತಿ ಇನ್ನೂ ಪ್ರತಿಷ್ಟಾಪನೆ ಆಗಿರಲಿಲ್ಲ ಎಂದರು.







