ಮಂಡ್ಯ,ಸೆಪ್ಟಂಬರ್,15,2026 (www.justkannada.in): ಗಣೇಶ ಹಬ್ಬ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಗಂಡ ಹೆಂಡತಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.
ಕೊಪ್ಪ ನಿವಾಸಿಗಳಾದ ಪತಿ ಮುತ್ತುರಾಜ್(35) ಪತ್ನಿ ಕಾವ್ಯ(30), ಕೀರ್ತನ (8) ಮೃತಪಟ್ಟವರು. ಓರ್ವ ಮಗಳು ಭುವನ ಅಪಘಾತದಲ್ಲಿ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಮುತ್ತುರಾಜ್ ಕುಟುಂಬ ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಹಬ್ಬ ಮುಗಿಸಿ ಬೆಳಗ್ಗಿನ ನಸುಕಿನ ಜಾವ ಬೈಕ್ ನಲ್ಲಿ ನಾಳ್ವರು ತೆರಳುತ್ತಿದ್ದ ವೇಳೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Key words: Accident, bike, Three members, same family, die.







