ರಾಯಚೂರು,ಸೆಪ್ಟಂಬರ್,11,2026 (www.justkannada.in): ಗಣೇಶ ಹಬ್ಬದ ಸಂಭ್ರಮಕ್ಕೆ ಇನ್ನೆರಡು ದಿನ ಬಾಕಿ ಇದ್ದು ಅದಕ್ಕೂ ಮುನ್ನವೇ ಗಣೇಶಮೂರ್ತಿ ತರುವ ವೇಳೆ ಅವಘಡವೊಂದು ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಅತ್ತನೂರಿನಲ್ಲಿ ನಡೆದಿದೆ. ಅತ್ತನೂರಿನ ಪ್ರೇಮ್ (26) ಮೃತ ಯುವಕ.
ಸುಮಾರು 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಹೈದರಾಬಾದ್‌ನಿಂದ ಸಿರವಾರಕ್ಕೆ ವಾಹನದಲ್ಲಿ ತರಲಾಗುತ್ತಿತ್ತು. ಈ ವೇಳೆ ಮೂರ್ತಿಯು ವಿದ್ಯುತ್ ತಂತಿಗೆ ಸಿಲುಕಿದ್ದು ತಂತಿ ತುಂಡಾಗಿ ಪ್ರೇಮ್ ಮೈ ಮೇಲೆ ಬಿದ್ದಿದೆ. ಈ ಪರಿಣಾಮ ವಿದ್ಯುತ್ ಪ್ರವಹಿಸಿ ಪ್ರೇಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: bringing, Ganesha idol, Young, tragic death.






