ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಇದು ಕೇಂದ್ರದ ಪ್ರಾಯೋಜಿತ ದಾಳಿ. ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ದಾಳಿ ಆರಂಭ ಅಷ್ಟೆ. ನನ್ನ ಮೇಲೆ ಡಿಕೆ ಶಿವಕುಮಾರ್ ಮೇಲೂ ಮಾಡಬಹುದು ನೋಡುತ್ತಿರಿ ಎಂದರು.
ಇಲ್ಲಿನ ಬಿಜೆಪಿ ನಾಯಕರ ಮೇಲೆ ಕೇಂದ್ರದವರಿಗೆ ನಂಬಿಕೆ ಇಲ್ಲ. ಹೀಗಾಗಿ ಇಡಿ ಐಟಿ ಇವರನ್ನ ಬಳಸಿಕೊಂಡು ಚುನಾವಣೆ ಎದುರಿಸ್ತಾರೆ ನಾಗೇಂದ್ರ ಮೇಲೆ ದಾಳಿ ಆಯ್ತು ಏನಾಯ್ತು? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Key words: ED raid, Satish Jarkiholi, residence, Home Minister, Priyank Kharge







