ಕೊಪ್ಪಳ,ಸೆಪ್ಟಂಬರ್,5,2026 (www.justkannada.in): ವಿಜಯೇಂದ್ರರ ಪಶ್ಚಾತ್ತಾಪದ ಯಾತ್ರೆ ಟೇಕಾಫ್ ಆಗಿಲ್ಲ. ನಮ್ಮ ಭಾಗದಲ್ಲಿ ವಿಜಯೇಂದ್ರರಿಗೆ ಯಾವುದೇ ಇಮೇಜ್ ಇಲ್ಲ. ಹೀಗಾಗಿ ನನ್ನ ಬಗ್ಗೆ ಮಾತಾಡಿ ರಾಜಕೀಯ ಮೈಲೇಜ್ ಪಡೆಯುವ ಯತ್ನ ನಡೆಸುತ್ತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಟಾಂಗ್ ಕೊಟ್ಟರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಿವೈ ವಿಜಯೇಂದ್ರ ವಿರುದ್ದ ಕಿಡಿಕಾರಿರುವ ಸಚಿವ ಶಿವರಾಜ್ ತಂಗಡಗಿ, ವಿಜಯೇಂದ್ರ ಅವರ ಭಾಷಣ ಕೀಳು ಹಾಗೂ ಆಧಾರರಹಿತ. ವೈಯಕ್ತಕ ಟೀಕೆ ಇಳಿದಿರುವುದು ಅಸಹಾಯಕತೆಯ ಸಂಕೇತ. ವಯಸ್ಸು ಅನುಭವದಲ್ಲಿ ನಾನು ವಿಜಯೇಂದ್ರ ಗಿಂತ ಹಿರಿಯ. ಹಿರಿಯರನ್ನ ಏಕವಚನದಲ್ಲಿ ಸಂಬೋಧಿಸುವುದು ದಡ್ಡತನ. ನಿಮಗಿಂತ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಲು ಬರುತ್ತೆ ಅದರೆ ನನ್ನ ಸಂಸ್ಕಾರ ಅದಲ್ಲ. ವಿಷಯಾಧಾರಿತವಾಗಿ ಮಾತನಾಡಲು ಅವರಿಗೆ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜಕೀಯ ಕೆಸರೆರಚಾಟದಲ್ಲಿ ನನಗೆ ಆಸಕ್ತಿ ಇಲ್ಲ. ಆರೋಪಗಳಿಗೆ ಉತ್ತರ ನೀಡುವುದು ನನ್ನ ಜವಾಬ್ದಾರಿ ರೈತರಿಗಾಗಿ ನೀರು ಒದಗಿಸಿದ್ದು ಡಿಕೆ ಶಿವಕುಮಾರ್ ಮತ್ತು ನಾನು. ನೀರು ನಿಮ್ಮಪ್ಪನದ್ದೂ ಅಲ್ಲ ನಮ್ಮಪ್ಪನದ್ದೂ ಅಲ್ಲ. ರೈತರಿಗಾಗಿ ವಿಜಯೇಂದ್ರ ಏನು ಮಾಡಿದ್ದಾರೆಂದು ಹೇಳಲಿ. ಭ್ರಷ್ಟಾಚಾರದ ವಿರುದ್ದ ಮಾತನಾಡುವ ನೈತಿಕತೆ ನಿಮಗಿಲ್ಲ ಭ್ರಷ್ಟಾಚಾರದ ಪಿತಾಮಹರನ್ನ ಕಂಕುಳಲ್ಲಿ ಇಟ್ಟುಕೊಡಿದ್ದಾರೆ. ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ವಿಜಯೇಂದ್ರರ ಅರ್ಥನಾದ ಎಂದು ಲೇವಡಿ ಮಾಡಿದರು.
Key words: Vijayendra, repentance, journey,not taken off, Minister, Shivraj Thangadgi







