Thursday, September 3, 2026

BDA Apartments

Home Front Page ಸೆ.21 ರಿಂದ ಮೂರು ದಿನ ವಿಶೇಷ ಅಧಿವೇಶನಕ್ಕೆ ತೀರ್ಮಾನ- ಡಿಸಿಎಂ ಪರಮೇಶ್ವರ್

ಸೆ.21 ರಿಂದ ಮೂರು ದಿನ ವಿಶೇಷ ಅಧಿವೇಶನಕ್ಕೆ ತೀರ್ಮಾನ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಸೆಪ್ಟಂಬರ್,3,2026 (www.justkannada.in): ಸೆಪ್ಟಂಬರ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾತನಾಡಿದ ಡಿಸಿಎಂ ಪರಮೇಶ್ವರ್,  ಸೆಪ್ಟಂಬರ್, 21, 22, 23 ರಂದು ವಿಶೇಷ ಅಧಿವೇಶನ ನಡೆಸಲು  ನಿರ್ಧರಿಲಾಗಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅನೇಕ ಜ್ವಲಂತ ಸಮಸ್ಯೆಗಳಿವೆ.  ಸದನದಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶ ಸಿಗುತ್ತಿಲ್ಲ.  ಅದರಲ್ಲೂ ಈ ವರ್ಷ ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ಇದೆ . ಇಂತಹ ಬರಗಾಲ ಬಂದಿರಲಿಲ್ಲ ಸೂಪರ್ ಎಲ್ ನಿನೋ ಬಂದಿದೆ. ವಿಧಾನಮಂಡಲ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚೆಯಾಗಬೇಕು  ಹೀಗಾಗಿ ಅಧಿವೇಶನ ಕರೆಯಲಾಗಿದೆ ಎಂದರು.

ಜೊತೆಗೆ ಕಸ್ತೂರಿ ರಂಗನ್ ವರದಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈಗಾಗಲೇ ನಾಲ್ಕೈದು ಬಾರಿ ರಿಜೆಕ್ಟ್ ಮಾಡಿದ್ದೇವೆ.   ಕಸ್ತೂರಿ ರಂಗನ್ ವರದಿ ಬಗ್ಗೆ ಜನ ಸಮುದಾಯಕ್ಕೆ ತಿಳಿಸಬೇಕು ವಿಶೇಷ ಅಧಿವೇಶನದಲ್ಲಿ ರಂಗನ್ ವರದಿ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.

Key words: three-day, special session , September 21st ,DCM, Parameshwara