Wednesday, September 2, 2026

BDA Apartments

Home Front Page ಬಿಜೆಪಿ ತಮ್ಮ ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ- ಸಿಎಂ ಡಿಕೆಶಿ ವ್ಯಂಗ್ಯ

ಬಿಜೆಪಿ ತಮ್ಮ ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ- ಸಿಎಂ ಡಿಕೆಶಿ ವ್ಯಂಗ್ಯ

ಬೆಂಗಳೂರು,ಸೆಪ್ಟಂಬರ್,2,2026 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ ಖಂಡಿಸಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಪಾದಯಾತ್ರೆ ಬಗ್ಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಇದು ನಾಚಿಕೆಗೇಡಿನ ಪಾದಯಾತ್ರೆ  ತಮ್ಮ ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.  ಆಂತರಿಕ ಬಿಕ್ಕಟ್ಟನ್ನು ಒಗ್ಗೂಡಿಸುವ ಪ್ರಯತ್ನಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ  ಎಂದು ಲೇವಡಿ ಮಾಡಿದರು.

ಅದೇನು ಪಾದಯಾತ್ರ ಅಲ್ಲ ಅದಕ್ಕೆ ನನ್ನದೊಂದು ಯಾತ್ರೆ ಇದೆ. ಅವರು ಪಾದಯಾತ್ರೆ ಮಾಡಲಿ ನನ್ನ ಪಾದಯತ್ರೆ ಬಗ್ಗೆ ಅಮೇಲೆ ಹೇಳುತ್ತೇನೆ.  ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ನಮ್ಮ ರಾಜಕಾರಣ ಮಾಡೋಣ.  ರಾಜಕಾರಣ ಮಾಡುವ ಸಮಯದಲ್ಲಿ ರಾಜಕಾರಣ ಮಾಡಲಿ ಎಂದು  ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Key words: BJP, Padayadre, their, party organization, CM DK Shivakumar