Thursday, October 15, 2026

Dasara Wishes

Happy Dasara
Home Front Page ಪ್ರಧಾನಿ ಮೋದಿ ಭೇಟಿಯಾಗಿ ಚರ್ಚಿಸಿದ ಕೇಂದ್ರ ಸಚಿವ HDK

ಪ್ರಧಾನಿ ಮೋದಿ ಭೇಟಿಯಾಗಿ ಚರ್ಚಿಸಿದ ಕೇಂದ್ರ ಸಚಿವ HDK

ನವದೆಹಲಿ, ಆಗಸ್ಟ್, 27,2026 (www.justkannada.in):  ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿ, ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯ  ಕೈಗೊಂಡಿರುವ ಪರಿವರ್ತನಾತ್ಮಕ ಕ್ರಮಗಳನ್ನು ವಿವರಿಸಲಾಯಿತು. ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯದ ಪ್ರಮುಖ ಆದ್ಯತೆಗಳು ಮತ್ತು ನಡೆಯುತ್ತಿರುವ ಉಪಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ . ದೇಶದಲ್ಲಿ ಉಕ್ಕಿನ ಕ್ಷೇತ್ರಗಳನ್ನು ಬಲಪಡಿಸುವುದು, ಸ್ವಾವಲಂಬನೆಯನ್ನು ಮುನ್ನಡೆಸುವುದು ಮತ್ತು ವಿಕ್ಷಿತ ಭಾರತದತ್ತ ನಮ್ಮ ಪ್ರಯಾಣವನ್ನು ವೇಗಗೊಳಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎನ್ ಡಿಎ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಿ, ಮಾರ್ಗದರ್ಶನ ಪಡೆಯಲಾಯಿತು ಎಂದು ತಿಳಿಸಿದ್ದಾರೆ.  ಪ್ರಧಾನಿ ಮೋದಿ ಭೇಟಿ  ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.ಪ್ರಧಾನಿ ಮೋದಿ ಭೇಟಿಯಾಗಿ jk02_new jk02 new

Key words: Union Minister, HDK, met, PM Modi