ಬೆಂಗಳೂರು,ಆಗಸ್ಟ್,27,2026 (www.justkannada.in): ರಾಜ್ಯದ 101 ತಾಲ್ಲೂಕುಗಳು ಬರಪೀಡಿತ ಎಂದು ಕಂದಾಯ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಘೋಷಣೆ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಜೂನ್ 1 ರಿಂದ ಈವರೆಗೆ 666 ಮೀ.ಮೀ ಮಳೆಯಾಗಬೇಕಿತ್ತು . ಈಗ ಆಗಿರುವುದು 464 ಮಿ.ಮೀ ಮಳೆ ಮಾತ್ರ. ಒಳನಾಡು ಕರ್ನಾಟಕದಲ್ಲಿಶೇ. 33 ರಷ್ಟು ಮಳೆ ಕಡಿಮೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ 41% ಕರವಳಿಯಲ್ಲಿ 24% ಮಳೆ ಕೊರತೆಯಾಗಿದೆ. 190 ತಾಲ್ಲೂಕಗಳಲ್ಲಿ ಮಳೆ ಕೊರತೆಯಾಗಿದೆ. 13 ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದರು.
ರಾಜ್ಯದ 101 ತಾಲ್ಲೂಕು ಬರಪೀಡಿತ ಎಂದು ಗುರುತಿಸಲಾಗಿದೆ. ಡಿಸಿಗಳ ವರದಿ ಅನ್ವಯ 101 ತಾಲ್ಲೂಕು ಗುರುತಿಸಲಾಗಿದೆ. 134 ತಾಲ್ಲೂಕುಗಳಲ್ಲೂ ಬರ ಎಂದು ಘೋಷಿಸಲು ಪೂರಕ ಅಂಶಗಳಿವೆ. 134 ತಾಲ್ಲೂಕುಗಳಿಗೂ ಟೀಮ್ ಕಳುಹಿಸಲಾಗಿತ್ತು. 89 ತಾಲ್ಲೂಕುಗಳಲ್ಲಿ ತೀವ್ರ ಬರ, 12 ತಾಲ್ಲೂಕುಗಳಲ್ಲಿ ಸ್ವಲ್ಪ ಬರ ಇದೆ ಎಂದು ಪರಮೇಶ್ವರ್ ತಿಳಿಸಿದರು.
ಬರ ಪರಿಹಾಕ್ಕಾಗಿ ಕೇಂದ್ರದ ಮೊರ ಹೋಗಲಿದ್ದೇವೆ. ಕೇಂದ್ರ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
Key words: 101 taluks, state, drought-affected, DCM, Parameshwar







