Sunday, October 11, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ತಮಿಳುನಾಡಿಗೆ ಹರಿದ ಬರೊಬ್ಬರಿ 33 TMC ನೀರು: ಬರಿದಾದ ಕಾವೇರಿ ಜಲಾನಯನ ಪ್ರದೇಶಗಳು  

ತಮಿಳುನಾಡಿಗೆ ಹರಿದ ಬರೊಬ್ಬರಿ 33 TMC ನೀರು: ಬರಿದಾದ ಕಾವೇರಿ ಜಲಾನಯನ ಪ್ರದೇಶಗಳು  

ಮೈಸೂರು,ಆಗಸ್ಟ್,25,2026 (www.justkannada.in):  ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮುಂಗಾರು ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಗಳು ಭರ್ತಿಯಾಗದೇ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಬರೋಬ್ಬರಿ 33 ಟಿಎಂಸಿ ನೀರು ಹರಿಸಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿಯ ಶಿಫಾರಸ್ಸು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ  ಮಾಡುತ್ತಿರುವ ರಾಜ್ಯ ಸರ್ಕಾರ ಕೆ‌ಆರ್ ಎಸ್ ಡ್ಯಾಂನಿಂದ 7 ಟಿಎಂಸಿ, ಕಬಿನಿ ಜಲಾಶಯದಿಂದ ಬರೊಬ್ಬರಿ 26 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಈವರೆಗೆ 33 ಟಿಎಂಸಿ ನೀರು ಬಿಡುಗಡೆ ಮಾಡಿದ್ದು,  ಪ್ರತಿ ನಿತ್ಯ ಸಾವಿರಾರು ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳು ಬರಿದಾಗುತ್ತಿದ್ದು ಸಂಕಷ್ಟದ ಪರಿಸ್ಥಿತಿ ಎದುರಾಗುವ ಆತಂಕವಿದೆ. ತಮಿಳುನಾಡಿಗೆ ಹರಿದ ಬರೊಬ್ಬರಿ 33 krs

ಈಗಾಗಲೇ ಉತ್ತಮ ಮಳೆಯಿಂದಾಗಿ ಭರ್ತಿಯಾಗಿದ್ದ ಕಬಿನಿ ಜಲಾಶಯ 12 ಅಡಿ ಖಾಲಿಯಾಗಿದ್ದು, ಭರ್ತಿಯಾಗಬೇಕಿದ್ದ ಕೆ ಆರ್ ಎಸ್ ನಿಂದ 7 ಟಿಎಂಸಿ ನೀರು ಖಾಲಿಯಾಗಿದೆ. ನೀರು ಹರಿಸದಿದ್ದಿದ್ದರೆ ಕೆಆರ್ ಎಸ್ ಜಲಾಶಯ  120 ಅಡಿ ತಲುಪುತಿತ್ತು. ಕಬಿನಿ ಡ್ಯಾಂಗೆ ಎಂದಿನಂತೆ ಬಾಗಿನ ಅರ್ಪಣೆ ಮಾಡಬಹುದಿತ್ತು.ತಮಿಳುನಾಡಿಗೆ ಹರಿದ ಬರೊಬ್ಬರಿ 33 TMC ನೀರು jk02_new jk02 new

Key words:  33 TMC, water, Tamil Nadu, Cauvery River, KRS, Kabini