Sunday, October 11, 2026

Dasara Wishes

Happy Dasara
Home Crime ಎಸ್ಪಿ ಆದೇಶಕ್ಕೆ ಬೆಚ್ಚಿದ ರೌಡಿ ಪಡೆ: ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ...

ಎಸ್ಪಿ ಆದೇಶಕ್ಕೆ ಬೆಚ್ಚಿದ ರೌಡಿ ಪಡೆ: ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ ಪೊಲೀಸರು…

ತುಮಕೂರು,ನ,5,2019(www.justkannada.in): ಇತ್ತೀಚೆಗೆ ತುಮಕೂರು ನಗರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಿರುವ ಹಿನ್ನೆಲೆ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ಸಮಾಜಘಾತಕ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಆದೇಶದ ಹಿನ್ನಲೆ, ನಗರದ ಪೊಲೀಸರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ರೌಡಿ ಶೀಟರ್ ಮನೆಗಳ ಮೇಲೆ ದಿಢೀರ್  ದಾಳಿ ನಡೆಸಿ ಪರಿಶೀಲಿಸಿದರು. ನಗರದಾದ್ಯಂತ ರೌಡಿಗಳ ಮನೆಬಾಗಿಲು ತಟ್ಟಿದ ಪೊಲೀಸರು ದಾಳಿ ವೇಳೆ ಸಮಾಜಘಾತಕ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.

ಪೊಲೀಸರ ದಿಢೀರ್ ಕಾರ್ಯಚರಣೆಯಿಂದ ರೌಡಿಗಳ ಎದೆಯಲ್ಲಿ ನಡುಕ ಉಂಟಾಗಿದ್ದು ಎಸ್ಪಿ ಆದೇಶಕ್ಕೆ ರೌಡಿಶೀಟರ್ ಗಳು ಬೆಚ್ಚಿಬಿದ್ದಿದ್ದಾರೆ.

Key words: tumkur-Police- attack- rowdy sheater- houses – Warning