Wednesday, October 7, 2026

BDA Apartments

Home Front Page ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ

ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಆಗಸ್ಟ್,22,2026 (www.justkannada.in): ಭಾರತದ  ಶಿಕ್ಷಣ ವ್ಯವಸ್ಥೆ  ಈಗ ಆರ್ ಎಸ್ ಎಸ್ ನ ಅಡ್ಡೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಹರಿಹಾಯ್ದರು.

ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಎಲ್ಲಾ ಕಡೆ ಸಂಘದವರನ್ನೇ ನೇಮಕ ಮಾಡುತ್ತಿದ್ದಾರೆ ಬೇರೆಯವರು ಯಾರು ಯೋಗ್ಯರಿಲ್ವಾ?  3 ಲಕ್ಷ ಕೋಟಿ ರೂ. ಖರ್ಚು ಮಾಡಿದರೂ ಬುಲೆಟ್ ಟ್ರೈನ್ ಬರಲಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಬುಲೆಟ್  ಹಾರಿಸುತ್ತಿದ್ದಾರೆ. ನನ್ನ ದಲಿತ ನಾಯಕ ಅಂತಾರೆ ನಾನು ಕಾಂಗ್ರೆಸ್ ನಾಯಕ ಎಂದರು.ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ mallikarjuna kharge

ನಾನು ಉತ್ತರಾಖಂಡ್ ನಲ್ಲಿದ್ದಾಗ ಯಾರೂ ಏನೂ ಮಾಡಿರಲಿಲ್ಲ. ಅಲ್ಲಿನ ಕೆಲ ಮುಖಂಡರು ದೆಹಲಿಗೆ ಬಂದು ಅಮಿತ್ ಶಾ ಭೇಟಿಯಾದರು ದೆಹಲಿಯಿಂದ ಉತ್ತರಖಂಡ್ ಗೆ ಹಿಂದಿರುಗಿ ಶುದ್ದೀಕರಣ  ದೊಡ್ಡ ಸುದ್ದಿಯಾಗಲಿ ಎಂದು ಭಾಷಣದ ಜಾಗ ಶುದ್ದೀಕರಿಸಿದರು. ಮೋದಿ, ಅಮಿತ್ ಶಾ ತೊಂದರೆ ಕೊಡೋದು ಜಾಸ್ತಿಯಾಗಿದೆ. ಈಗ ಅವರ ಶಿಷ್ಯಂದಿರ ಕಡೆಯಿಂದ ತೊಂದರೆ ಕೊಡಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ  ಹರಿಹಾಯ್ದರು.ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ jk02_new jk02 new

Key words: India ,education, system, RSS, Mallikarjun Kharge