Saturday, August 22, 2026

BDA Apartments

Home Crime MYSORE : ಲಿಂಗಾಂಬುದ್ದಿಪಾಳ್ಯ ಸರ್ಕಾರಿ ಶಾಲಾ ಆವರಣವೇ  ಮದ್ಯವ್ಯಸನಿಗಳ ಅಡ್ಡೆ.!

MYSORE : ಲಿಂಗಾಂಬುದ್ದಿಪಾಳ್ಯ ಸರ್ಕಾರಿ ಶಾಲಾ ಆವರಣವೇ  ಮದ್ಯವ್ಯಸನಿಗಳ ಅಡ್ಡೆ.!

Mysuru: The Government School premises at Lingambudhipalya have allegedly become a hangout for drunkards and substance users after school hours. Despite repeated warnings from teachers, the nuisance reportedly continues. Every morning, beer bottles, solution tubes, cigarette and beedi butts are found scattered across the campus, forcing school staff to clean up the mess. The situation has raised serious concerns over children’s safety and security. Will the authorities act before something serious happens?

 

ಮೈಸೂರು, AUG.22,2026: ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಶಾಲಾ ಆವರಣವೇ ಸಂಜೆ ವೇಳೆಗೆ ಕುಡುಕರು, ಮದ್ಯವ್ಯಸನಿಗಳು ಹಾಗೂ ಗಾಂಜಾ ಸೇವಿಸುವವರ ಅಡ್ಡೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೈಸೂರಿನ ಲಿಂಗಾಂಬುದ್ದಿಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ ನಂತರ ಕೆಲವರು ನಿರಂತರವಾಗಿ ಮದ್ಯ ಸೇವನೆ, ಧೂಮಪಾನ ಹಾಗೂ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಶಾಲೆಯ ವಾತಾವರಣವೇ ಆತಂಕಕಾರಿಯಾಗಿದೆ.

ಶಾಲಾ ಶಿಕ್ಷಕರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ‘ಶಾಲೆ ಯಾರದ್ದು? ನಮಗೇನು?’ ಎಂಬ ಧೋರಣೆಯಲ್ಲಿ ಕೆಲವರು ವರ್ತಿಸುತ್ತಿದ್ದಾರೆ ಎಂಬ ಆರೋಪವಿದೆ.

ಇದರ ಪರಿಣಾಮವಾಗಿ ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ಮತ್ತು ಶಿಕ್ಷಕರಿಗೆ ಮೊದಲು ಕಾಣಿಸುವುದು ಬಿಯರ್ ಬಾಟಲಿಗಳು, ಸಲ್ಯೂಷನ್ ಟ್ಯೂಬ್‌ಗಳು, ಬೀಡಿ-ಸಿಗರೇಟ್ ತುಂಡುಗಳು ಮತ್ತು ಇತರೆ ತ್ಯಾಜ್ಯಗಳು!

ಮಕ್ಕಳಿಗೆ ಸ್ವಚ್ಛತೆ, ಶಿಸ್ತು ಮತ್ತು ಉತ್ತಮ ನಡವಳಿಕೆಯ ಪಾಠ ಹೇಳಬೇಕಾದ ಶಿಕ್ಷಕರೇ, ಪ್ರತಿದಿನ ಶಾಲೆ ಆರಂಭಕ್ಕೂ ಮುನ್ನ ಕುಡುಕರ ಮತ್ತು ವ್ಯಸನಿಗಳ ಬಿಟ್ಟುಹೋದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಯೋ… ವ್ಯಸನಿಗಳ ಅಡ್ಡೆಯೋ?

ಇದು ಕೇವಲ ಸ್ವಚ್ಛತೆಯ ಸಮಸ್ಯೆಯಲ್ಲ. ಇದು ಮಕ್ಕಳ ಸುರಕ್ಷತೆಯ ಪ್ರಶ್ನೆ. ಸಂಜೆ ವೇಳೆಯಲ್ಲಿ ಶಾಲಾ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸುವವರ ಮೇಲೆ ನಿಗಾ ಇಲ್ಲವೇ? ಶಾಲಾ ಆವರಣವನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಏಕೆ ಮುಂದಾಗುತ್ತಿಲ್ಲ?

ಶಿಕ್ಷಕರ ಎಚ್ಚರಿಕೆಯನ್ನೇ ನಿರ್ಲಕ್ಷಿಸುವ ಮಟ್ಟಿಗೆ ಪರಿಸ್ಥಿತಿ ತಲುಪಿದ್ದರೆ, ಮುಂದೆ ಯಾವುದಾದರೂ ಅಹಿತಕರ ಘಟನೆ ನಡೆದ ಬಳಿಕವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?

ಮಕ್ಕಳು ಓದುವ ಸ್ಥಳದಲ್ಲಿ ಮದ್ಯದ ಬಾಟಲಿ, ಸಿಗರೇಟ್ ತುಂಡುಗಳು ಮತ್ತು ಮಾದಕ ವಸ್ತುಗಳ ಅವಶೇಷಗಳು ಸಿಗುವುದು ಸಾಮಾನ್ಯ ದೃಶ್ಯವಾಗಬಾರದು. ಶಾಲೆ ಎಂದರೆ ಮಕ್ಕಳ ಭವಿಷ್ಯ ರೂಪಿಸುವ ಸ್ಥಳ. ಅದು ಕುಡುಕರಿಗೂ, ವ್ಯಸನಿಗಳಿಗೂ ಅಡ್ಡೆಯಾಗಲು ಬಿಡಬಾರದು.

ಹೀಗಾಗಿ ಸಂಬಂಧಪಟ್ಟ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸಂಜೆ ವೇಳೆ ಶಾಲಾ ಆವರಣಕ್ಕೆ ಅನಧಿಕೃತ ಪ್ರವೇಶ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ‘ಡೊಂಟ್ ಕೇರ್’ ಧೋರಣೆ ತೋರಿಸುವವರ ವಿರುದ್ಧ ಕಾನೂನು ಕ್ರಮ ಯಾವಾಗ?

ಇದು ಲಿಂಗಾಂಬುದ್ದಿಪಾಳ್ಯದ ಶಾಲೆಯ ಪ್ರಶ್ನೆ ಮಾತ್ರವಲ್ಲ…

ಮಕ್ಕಳ ಭವಿಷ್ಯವನ್ನು ರಕ್ಷಿಸಬೇಕಾದ ವ್ಯವಸ್ಥೆಯ ಜವಾಬ್ದಾರಿಯ ಪ್ರಶ್ನೆ.

Key words: Mysuru, Govt School, Turns into, Addicts’ Hangout, Lingambudhipaly, R.T.Nagara

SUMMARY:

Mysuru Govt School Turns into Addicts’ Hangout!

Mysuru: The Government School premises at Lingambudhipalya have allegedly become a hangout for drunkards and substance users after school hours.

Despite repeated warnings from teachers, the nuisance reportedly continues. Every morning, beer bottles, solution tubes, cigarette and beedi butts are found scattered across the campus, forcing school staff to clean up the mess. The situation has raised serious concerns over children’s safety and security. Will the authorities act before something serious happens?