Saturday, August 22, 2026

BDA Apartments

Home Front Page ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ CBI ಪತ್ರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ CBI ಪತ್ರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಆಗಸ್ಟ್,22,2026 (www.justkannada.in):  ಸಚಿವ ಬಿ.ನಾಗೇಂದ್ರ ವಿರುದ್ದ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ, ಸಿಬಿಐ ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೇಳಿದೆ ಎಂಬುದು  ಗೊತ್ತಿಲ್ಲ ಎಂದು ಟೀಕಿಸಿದರು.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಬಿ ನಾಗೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರ ಬಳಿ ಸಿಬಿಐ ಯಾವ ಆಧಾರದ ಮೇಲೆ ಅನುಮತಿ ಕೇಳಿದೆ ಗೊತ್ತಿಲ್ಲ ಸಿಬಿಐ “ಮೊದಲು ರಾಜ್ಯ ಸರ್ಕಾರವನ್ನು ಕೇಳಬೇಕು. ಈ ಹಿಂದೆ ಸಿಬಿಐಯೇ ಪ್ರಕರಣ ಕೊಡಬೇಡಿ ಎಂದು ಅಂದಿನ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ತನಿಖೆಗೆ ಸಿಬ್ಬಂದಿಯನ್ನು ನೀವೇ ನೀಡಬೇಕು ಎಂದು ಕೂಡ ಪತ್ರ ಬರೆದಿದ್ದರು” ಎಂದು ತಿಳಿಸಿದರು.

ಸಚಿವ ನಾಗೇಂದ್ರ ರಾಜೀನಾಗೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಪಾದಯಾತ್ರೆಗೆ ಸರ್ಕಾರದ ವಿರೋಧವಿಲ್ಲ “ಪಾದಯಾತ್ರೆ ಮಾಡಲಿ, ಬೇಡ ಎಂದವರು ಯಾರು? ನಾಗೇಂದ್ರ ವಿರುದ್ಧದ ಆರೋಪಗಳನ್ನು ಬಹಿರಂಗಪಡಿಸಲು ಬಿಜೆಪಿಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸುವ ಅವಕಾಶವಿತ್ತು. ಆದರೆ ಅವರು ಸದನದಲ್ಲಿ ಚರ್ಚೆ ನಡೆಸುತ್ತಿಲ್ಲ ಎಂದು  ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: CBI, letter, prosecution, B. Nagendra, Home Minister, Priyank Kharge