Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು- ಸಂಸದ ಶೆಟ್ಟರ್

ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು- ಸಂಸದ ಶೆಟ್ಟರ್

ಧಾರವಾಡ,ಆಗಸ್ಟ್,21,2026 (www.justkannada.in):  ಬಿ.ನಾಗೇಂದ್ರಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಏನಿತ್ತು? ಸಿಎಂ ಡಿಕೆ ಶಿವಕುಮಾರ್ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್,  ಇಷ್ಟೆಲ್ಲಾ ಆಗುತ್ತಿದ್ದರೂ ನಾಗೇಂದ್ರರ ರಾಜೀನಾಮೆ ಪಡೆಯುತ್ತಿಲ್ಲ. ಇವರಿಗೆ ನಾಚಿಕೆ ಆಗಬೇಕು.  ಲೋಕಾಯುಕ್ತ ಕೇಸ್ ಆಗಿದೆ ಪೊಲೀಸ್ ಕೇಸ್ ಆಗಿದೆ. ಸಿಬಿಐನಿಂದ ಕೇಸ್ ಆಗಿದೆ. ಇಡಿ ರೇಡ್ ಕೂಡ ಆಗಿದೆ. ಪ್ರಕರಣದಲ್ಲಿ ಎಲ್ಲ ಕಡೆ ಬಿ.ನಾಗೇಂದ್ರ ಹೆಸರು ಬಂದಿದೆ. ವಿಪಕ್ಷ ನಾಯಕ ಅಶೋಕ್ ಎಲ್ಲಾ ದಾಖಲೆ ಮುಂದಿಟ್ಟಿದ್ದಾರೆ.  ಬಿ.ನಾಗೇಂದ್ರಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.

ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ನಾಗೇಂದ್ರ ಎಟಿಎಂ ಆಗಿದ್ದಾರೆ.  ಸಚಿವರಾದವರು ಹೈಕಮಾಂಡ್ ಗೆ ದೇಣಿಗೆ ಕೊಟ್ಟಿದ್ದಾರೆ.  ಡಿಕೆ ಶಿವಕುಮಾರ್ ಕೂಡ ಇದನ್ನೇ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್  ಹರಿಹಾಯ್ದರು.ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು jk02_new jk02 new

Key words: B.Nagendra, Resignation, DK Shivakumar, MP Jagadish Shettar