Sunday, October 4, 2026

BDA Apartments

Home Front Page ಈ ಬಾರಿ ದಸರಾ ಮಹೋತ್ಸವದಲ್ಲಿ “ಕಂಬಳ” ಫಿಕ್ಸ್..!

ಈ ಬಾರಿ ದಸರಾ ಮಹೋತ್ಸವದಲ್ಲಿ “ಕಂಬಳ” ಫಿಕ್ಸ್..!

ಮೈಸೂರು,ಆಗಸ್ಟ್,19,2026 (www.justkannada.in): ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸುವುದು ಖಚಿತವಾಗಿದೆ.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ನಿರ್ಧಾರ ಮಾಡಿ ಜಾಗ ಗುರುತಿಸಿ ಪರಿಶೀಲನೆಯೂ ನಡೆಸಿತ್ತು. ಆದರೆ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೂ ಸಹ ಕಂಬಳ ನಡೆಸಲು ಮುಂದಾಗಿರುವ ಸರ್ಕಾರ ಇದೀಗ  ಇದಕ್ಕೆ ಉಪಸಮಿತಿಯನ್ನ ರಚನೆ ಮಾಡಿದ್ದು ಈ ಬಾರಿ ಕಂಬಳ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ.ಈ ಬಾರಿ ದಸರಾ ಮಹೋತ್ಸವದಲ್ಲಿ “ಕಂಬಳ” ಫಿಕ್ಸ್..! mysore dasara-kambala mysore dasara kambala

ಹೌದು. ನಾಡಹಬ್ಬ ಮೈಸೂರು ದಸರಾ ಆಚರಣೆಗಾಗಿ ರಾಜ್ಯ ಸರ್ಕಾರ ವಿವಿಧ ಉಪಸಮಿತಿಗಳನ್ನ ರಚನೆ ಮಾಡಿದ್ದು ಇದರಲ್ಲಿ ಕಂಬಳ ಉಪಸಮಿತಿಯೂ ಇದೆ.  ಕಂಬಳ ಉಪಸಮಿತಿಯ ಉಪ ವಿಶೇಷಾಧಿಕಾರಿಯಾಗಿ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ,  ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಉಪ ಅರಣ್ಯಾಧಿಕಾರಿ ಪರಮೇಶ,  ಕಾರ್ಯದರ್ಶಿಗಳಾಗಿ  ಪದ್ಮನಾಭ, ಮೈತ್ರಿ ಅವರನ್ನ ನೇಮಿಸಲಾಗಿದೆ.ಈ ಬಾರಿ ದಸರಾ ಮಹೋತ್ಸವದಲ್ಲಿ "ಕಂಬಳ" ಫಿಕ್ಸ್..! dasara mysore

ಸ್ವಾಗತ, ಅಮಂತ್ರಣ ಮ್ತು ಸ್ಥಳಾವಕಾಶ,  ಬಂದೋಬಸ್ತ್, ಪಂಜಿನ ಕವಾಯತು,  ಮೆರವಣಿಗೆ ಮತ್ತು ಸ್ತಬ್ದಚಿತ್ರ,  ರೈತ ದಸರಾ, ಸಾಮಸ್ಕೃತಿಕ ದಸರಾ,  ಲಲಿತ ಕಲೆ ಮತ್ತು ಕರಕುಶಲ ಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ, ಯುವದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ಕಂಬಳ, ಕುಸ್ತಿ, ಗಜಪಯಣ , ಕ್ರೀಡೆಗೆ ಉಪಸಮಿತಿಗಳನ್ನ ರಚಿಸಲಾಗಿದೆ.mysore jk02_new jk02 new

Key words: Mysore Dasara, Kambala, fix,  Sub committee