Monday, August 17, 2026

BDA Apartments

Home Front Page ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಆದೇಶ ಹಿಂಪಡೆಯಲ್ಲ-ಸಚಿವ ಯು.ಟಿ ಖಾದರ್

ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಆದೇಶ ಹಿಂಪಡೆಯಲ್ಲ-ಸಚಿವ ಯು.ಟಿ ಖಾದರ್

ಬೆಂಗಳೂರು,ಆಗಸ್ಟ್,17,2026 (www.justkannada.in): ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು  ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್,  ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಡೆಯಲ್ಲ ಸಿಎಂ ಜೊತೆ ಮಾತನಾಡುತ್ತೇನೆ. ಗುಟ್ಕಾ ಬ್ಯಾನ್ ಮಾಡುವುದರಿಂದ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ.  ಪಾನ್ ಮಸಾಲಾದಲ್ಲಿ ಮಿಕ್ಸ್ ಆಗಿ ಬಂದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಕನಿಷ್ಠ 3 ತಿಂಗಳೂ 4 ತಿಂಗಳು ಕಾದು ನೋಡಿ  ಕ್ರಮ ತೆಗೆದುಕೊಳ್ಳುತ್ತೇವೆ  ಎಂದು ಸಚಿವ ಯುಟಿ ಖಾದರ್ ಸ್ಪಷ್ಟನೆ ನೀಡಿದರು.

Key words: Gutka ,ban, order not, withdrawn, Minister, U.T. Khader