Saturday, August 15, 2026

BDA Apartments

Home Front Page ಸಂವಿಧಾನಕ್ಕಿಂತ ದೊಡ್ಡವರಲ್ಲ: RSS ನೋಂದಾಯಿಸಿ ಕಾರ್ಯ ಚಟುವಟಿಕೆ ಮಾಡಲಿ- ಸಚಿವ ಬಾಲಕೃಷ್ಣ

ಸಂವಿಧಾನಕ್ಕಿಂತ ದೊಡ್ಡವರಲ್ಲ: RSS ನೋಂದಾಯಿಸಿ ಕಾರ್ಯ ಚಟುವಟಿಕೆ ಮಾಡಲಿ- ಸಚಿವ ಬಾಲಕೃಷ್ಣ

ರಾಮನಗರ,ಆಗಸ್ಟ್,15,2026 (www.justkannada.in): ಆರ್ ಎಸ್ ಎಸ್ ನವರು ಸರ್ಕಾರ ಸಂವಿಧಾನಕ್ಕಿಂತ ದೊಡ್ಡವರಲ್ಲ. ಆರ್ ಎಸ್ ಎಸ್ ನೋಂದಾಯಿಸಿ  ತಮ್ಮ ಕಾರ್ಯಚಟುವಟಿಕೆ ಮಾಡಲಿ ಎಂದು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಾಲಕೃಷ್ಣ,  ಎಲ್ಲಾ ಸಂಘಟನೆಗಳು ಕೂಡ ನೋಂದಣಿ ಮಾಡಿಸಿಕೊಳ್ಳಬೇಕು. ಎಲ್ಲಾ ಸಂಘಟನೆಗಳು ಕೂಡ ಕಾನೂನಿನಡಿ ಕೆಲಸ ಮಾಡಬೇಕು.  ಆರ್ ಎಸ್ ನಿರ್ಬಂಧ ಅಂತಾ ಯಾಕೆ ಹೇಳುತ್ತೀರಾ?  ಎಂದು ಪ್ರಶ್ನಿಸಿದರು.

ಆರ್ ಎಸ್ ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ  ಹಾರಿಸದೇ ಇರುವ ವಾತಾವರಣ ಇತ್ತು.  ಇತ್ತೀಚೆಗೆ ಆರ್ ಎಸ್  ಕಚೇರಿಯಲ್ಲಿ ರಾಷ್ಟ್ರ ಧ್ವಜ  ಹಾರಿಸುತ್ತಿದ್ದಾರೆ. ನಾವೆಲ್ಲರೂ ಸಂವಿಧಾನದಡಿ ಕೆಲಸ ಮಾಡುತ್ತಿರುವವರು ಆರ್ ಎಸ್ ಎಸ್ ನವರು ಸರ್ಕಾರ ಸಂವಿಧಾನಕ್ಕಿಂತ ದೊಡ್ಡವರಲ್ಲ. ಆರ್ ಎಸ್ ನೋಂದಣಿ ಮಾಡಿ ಕಾರ್ಯ ಚಟುವಟಿಕೆ ಮಾಡಲಿ. ಆರ್ ಎಸ್ ಎಸ್ ಗೆ ಹೊರ ದೇಶದಿಂದ ಕೂಡ ಹಣ ಬರುವ ವಾತಾವರಣ ಇದೆ. ಲೆಕ್ಕ ಹೇಳಬೇಕು ಅಂದಾಗ ಬೇಕಲ್ಲವೇ ಎಂದು ಸಚಿವ ಹೆಚ್ ಸಿ ಬಾಲಕೃಷ್ಣ ಹೇಳಿದರು.

Key words: Constitution, RSS, register, work, Minister, Balakrishna