Saturday, August 15, 2026

BDA Apartments

Home Front Page ಬನ್ನಿ ನಾವೆಲ್ಲರೂ ಸೇರಿ ಒಟ್ಟಾಗಿ ಅಭಿವೃದ್ದಿ ತೇರನ್ನ ಎಳೆಯೋಣ- ಸಿಎಂ ಡಿಕೆ ಶಿವಕುಮಾರ್

ಬನ್ನಿ ನಾವೆಲ್ಲರೂ ಸೇರಿ ಒಟ್ಟಾಗಿ ಅಭಿವೃದ್ದಿ ತೇರನ್ನ ಎಳೆಯೋಣ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,15,2026 (www.justkannada.in): ಅಭಿವೃದ್ದಿ ತೇರನ್ನ ಎಳೆಯಲು ನನ್ನ ಎರಡು ಕೈ ಸಾಕಾಗಲ್ಲ. ಕರ್ನಾಟಕದ ಜನರು ಕೈಜೋಡಿಸಬೇಕು. ಬನ್ನಿ ನಾವೆಲ್ಲರೂ ಒಟ್ಟಾಗಿ ಅಭಿವೃದ್ದಿ ತೇರನ್ನು  ಎಳೆಯೋಣ ಎಂದು ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು.

ಇಂದು ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವಾಗಿದ್ದು ಈ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

ನಾಡಿನ ಜನತೆಗೆ ನಾನು ಸಾಕ್ಷಿ ಗುಡ್ಡೆ ಉಳಿಸಿಯೇ ಹೋಗುತ್ತೇನೆ.  ರಾಜ್ಯದಲ್ಲಿ ಬರ ಎದುರಿಸಲು ಸರ್ಕಾರ ದೃಢ ಹೆಜ್ಜೆ ಇರಿಸಿದೆ.  ನಮ್ಮ ಸರ್ಕಾರ ಈ ಪರಿಸ್ಥಿತಿ ಗಂಭೀರತೆ ಅರಿತಿದೆ. ಕುಡಿಯವ ನೀರು, ಮೇವು ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ವಿಭಾಗೀಯ ಸಭೆ ಮಾಡಿ ಸ್ಥಳದಲ್ಲೇ ಕ್ರಮ ಕೈಗೊಂಡಿದ್ದೇವೆ ಎಂದರು.

ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.   ಅರ್ಥಿಕ ಶಿಸ್ತಿಗಾಗಿ ಸಿದ್ದರಾಮಯ್ಯನವರ ಆಡಳಿತವನ್ನ ಸ್ಮರಿಸಬೇಕು ಕರ್ನಾಟಕ ರಾಜ್ಯದ ಆರ್ಥಿಕತೆಯನ್ನ ಬಲಪಡಿಸುವ ಗುರಿ ನಮ್ಮದು ಯುವಜನತೆ ಅನುಕೂಲಕ್ಕಾಗಿ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದೇವೆ ಎಐ ಶಿಕ್ಷಣವನ್ನು ಪರಿಚಯಿಸಲು ಕಾರ್ಯಕ್ರಮ ರೂಪಿಸಿದ್ದೇನೆ  ನಾನು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯುವ ಸಂಘಟನೆ ಸ್ಥಾಪನೆ ಮಾಡಿದ್ದೇವೆ ಎಂದರು.

Key words: 80th Independence Day, Celebrations, development, CM, DK Shivakumar