ಮೈಸೂರು,ಆಗಸ್ಟ್,15,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನ ಅಧಿಕಾರಿಗಳು ಪಾಲಿಸಿದ್ದು ಬರೋಬ್ಬರಿ 12,000 ಕ್ಯೂಸೆಕ್ಸ್ ನೀರನ್ನು ಹರಿಬಿಟ್ಟಿದ್ದಾರೆ. 
ಅಧಿಕಾರಿಗಳು ತಮಿಳುನಾಡು ಕೇಳಿದ್ದಷ್ಟು ನೀರು ಹರಿಸುತ್ತಿದ್ದು ಇದರಿಂದಾಗಿ ಕಬಿನಿ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ. ತಮಿಳುನಾಡಿಗೆ ನೆನ್ನೆಯವರೆಗೆ 10,000 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಈಗ ಏಕಾಏಕಿ 12,000 ಕ್ಯೂಸೆಕ್ ಗೆ ಏರಿಕೆ ಮಾಡಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕೂಡ ಇಳಿಮುಖವಾಗಿದೆ.
ಜಲಾಶಯಕ್ಕೆ 8701 ಕ್ಯೂಸೆಕ್ಸ್ ಮಾತ್ರ ಒಳಹರಿವು ಇದೆ. ತಮಿಳುನಾಡಿಗೆ ನೀರು ಹರಿಬಿಟ್ಟ ಪರಿಣಾಮ ಜಲಾಶಯದ ನೀರಿನ ಮಟ್ಟ ಕೂಡ ಕುಸಿತ ಕಂಡಿದೆ. ನಿನ್ನೆ 82.30 ಅಡಿ ಇದ್ದ ಕಬಿನಿ ಜಲಾಶಯದ ನೀರು ಇಂದು 81.63 ಅಡಿಗೆ ಕುಸಿತವಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ ಇದ್ದು ಇಂದಿನ ಸಾಮರ್ಥ್ಯ 18.01 ಟಿಎಂಸಿಗೆ ಕುಸಿತವಾಗಿದೆ.
Key words: release, water, from, Kabini, to,Tamil Nadu







