Friday, August 14, 2026

BDA Apartments

Home Front Page ಬೆಂಗಳೂರಿಗರೇ ಗಮನಿಸಿ: ಮನೆ ಮುಂದೆ ಕಾರು ನಿಲ್ಲಿಸೋಕು ಇನ್ಮುಂದೆ ಕಟ್ಟಬೇಕು ಶುಲ್ಕ..

ಬೆಂಗಳೂರಿಗರೇ ಗಮನಿಸಿ: ಮನೆ ಮುಂದೆ ಕಾರು ನಿಲ್ಲಿಸೋಕು ಇನ್ಮುಂದೆ ಕಟ್ಟಬೇಕು ಶುಲ್ಕ..

ಬೆಂಗಳೂರು,ಆಗಸ್ಟ್,14,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ಹೆಚ್ಚುತ್ತಿರುವ ವಾಹ ದಟ್ಟಣೆ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ಸಮಸ್ಯೆಗಳಿಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುದಾಗಿದ್ದು ಹೊಸ ಪಾರ್ಕಿಂಗ್ ನೀತಿ ಕರಡು ಪ್ರಸ್ತಾವನೆಯನ್ನ ಪ್ರಕಟಿಸಿದೆ. ಇದಕ್ಕೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 30 ದಿನಗಳ (ಆಗಸ್ಟ್ 11ರಿಂದ) ಅವಕಾಶ ನೀಡಲಾಗಿದೆ.

ಈ ಪಾರ್ಕಿಂಗ್ ನೀತಿಯ ಪ್ರಕಾರ ಬೆಂಗಳೂರಿನಲ್ಲಿ  ವಸತಿ ಪ್ರದೇಶಗಳಲ್ಲಿ ತಮ್ಮ ಮನೆಯ ಮುಂದೆ ಕಾರು ನಿಲ್ಲಿಸುವ ಮಾಲೀಕರು ವರ್ಷಕ್ಕೆ ಕನಿಷ್ಠ 15 ಸಾವಿರ ರೂ. ಶುಲ್ಕವನ್ನು ನಗರ ಪಾಲಿಕೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ, ಇನ್ನು ಮುಂದೆ ಸಾರ್ವಜನಿಕ ರಸ್ತೆಗಳಲ್ಲಿ ಸೈಕಲ್-ಆಟೊ ಹೊರತುಪಡಿಸಿ ಇನ್ಯಾವುದೇ ವಾಹನಗಳಿಗೆ ಉಚಿತ ಪಾರ್ಕಿಂಗ್ ಇರುವುದಿಲ್ಲ.

ವಸತಿ ಪ್ರದೇಶಗಳಲ್ಲಿರುವ ಸಾರ್ವಜನಿಕ ರಸ್ತೆಗಳಲ್ಲಿ ನಾಗರಿಕರು ತಮ್ಮ ಮನೆ ಮುಂದೆ ಕಾರು ನಿಲುಗಡೆ ಮಾಡಲು ನಗರ ಪಾಲಿಕೆಗಳಿಂದ ‘ಪರವಾನಗಿ’ ಪಡೆಯಬೇಕು. ಸಣ್ಣ ಕಾರಿಗೆ ವರ್ಷಕ್ಕೆ 15 ಸಾವಿರ ರೂ, ಸೆಡಾನ್ ಕಾರಿಗೆ 20 ಸಾವಿರ ರೂ.  ಎಸ್ ಯುವಿಗೆ 25 ಸಾವಿರ ಊ.  ಶುಲ್ಕವನ್ನು ಪಾವತಿಸಬೇಕು. ಇದಲ್ಲದೆ ಜಿಬಿಎ ಮುಖ್ಯ ಆಯುಕ್ತರು ನಿಗದಿಪಡಿಸುವ ಅಡಳಿತಾತ್ಮಕ ಶುಲ್ಕವನ್ನು ನಗರ ಪಾಲಿಕೆಗಳು ವಿಧಿಸಬಹುದು ಎಂದು ‘ಜಿಬಿಎ ಪಾರ್ಕಿಂಗ್ ನಿಯಮಗಳು-2026’ರಲ್ಲಿ ನಮೂದಿಸಲಾಗಿದೆ.

ನಗರದ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಜಿಬಿಎ ಪ್ರೋತ್ಸಾಹ ನೀಡಲಿದೆ. ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ. ಸರ್ಕಾರಿ ನಿಗಮಗಳ ವ್ಯಾಪ್ತಿಯ ಖಾಲಿ ಜಾಗಗಳನ್ನೂ ಪಾರ್ಕಿಂಗ್‌ಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಸಂಬಂಧಪಟ್ಟ ನಿಗಮಗಳಿಂದ ಅನುಮತಿ ಪಡೆದು ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಅವಕಾಶವನ್ನು ಅಕ್ರಮವಾಗಿ ಪಾರ್ಕಿಂಗ್ ಗುತ್ತಿಗೆ ಪಡೆದವರಿಗೆ ಟೋಯಿಂಗ್ ನೀಡಲಾಗಿದ್ದು, ರಸ್ತೆಯಲ್ಲಿ ನಿಲ್ಲಿಸಿರುವ ವಾಹನವನ್ನು ಆ ಗುತ್ತಿಗೆದಾರರೇ ತಮ್ಮ ಪಾರ್ಕಿಂಗ್ ಸ್ಥಳಗಳಿಗೆ ಕೊಂಡೊಯ್ಯಬಹುದು. ಈ ನಿಯಮ ಉಲ್ಲಂಘನೆಗೆ ಕಾರುಗಳಿಗೆ 500 ರೂ ಹಾಗೂ ದ್ವಿಚಕ್ರ ವಾಹನ ಗಳಿಗೆ 300 ರೂ. ದಂಡ ವಿಧಿಸಲಾಗುವುದು ಎಂದು  ತಿಳಿಸಿದೆ.

Key words: Bengaluru, residents, Free Parking, fee, GBA