Tuesday, September 29, 2026

BDA Apartments

ಶಾಸಕನ ಪುತ್ರಿಯಿಂದ ದರ್ಪ: ಎಸ್‌ ಐ‌ಗೆ ಕಪಾಳಮೋಕ್ಷ BDA JK_Adv BDA Adv
Home Crime ಶಾಸಕನ ಪುತ್ರಿಯಿಂದ ದರ್ಪ: ಎಸ್‌ ಐ‌ಗೆ ಕಪಾಳಮೋಕ್ಷ

ಶಾಸಕನ ಪುತ್ರಿಯಿಂದ ದರ್ಪ: ಎಸ್‌ ಐ‌ಗೆ ಕಪಾಳಮೋಕ್ಷ

ಮಂಡ್ಯ,ಆಗಸ್ಟ್,14,2026 (www.justkannada.in): ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಎಂಬುವವರು ಮಹಿಳಾ ಎಸ್‌ ಐ‌ಗೆ ಕಪಾಳಮೋಕ್ಷ ಮಾಡುವ ಮೂಲಕ ದರ್ಪ ತೋರಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ ಐ ಸವಿತಾ ಅವರಿಗೆ ಶಾಸಕ ಬಿ.ಸುರೇಶ್‌ಗೌಡ ಪುತ್ರಿ ಐಶ್ವರ್ಯ ಕಪಾಳಮೋಕ್ಷ ಮಾಡಿ ದರ್ಪ ಮೆರೆದಿದ್ದಾರೆ.

ಕಳೆದ ಬುಧವಾರ ಭೀಮನ ಅಮವಾಸ್ಯೆ ಹಿನ್ನೆಲೆ ಐಶ್ವರ್ಯ ಉಕ್ಕಡಕ್ಕೆ ಬಂದಿದ್ದು, ಈ ವೇಳೆ ದೇವಸ್ಥಾನ ಸಾವಿರಾರು ಸಂಖ್ಯೆಯ ಭಕ್ತರಿಂದ ತುಂಬಿತ್ತು. ಹಾಗಿದ್ದರೂ ಸಹ ಐಶ್ವರ್ಯ ಪ್ರಭಾವ ಬಳಸಿ ವಿಐಪಿ ಪ್ರವೇಶ ಪಡೆದಿದ್ದು ಬಳಿಕ ದೇವರ ಗರ್ಭಗುಡಿ ಬಳಿ ಬಿಡಿ ಎಂದ ಶಾಸಕನ ಪುತ್ರಿ ಐಶ್ವರ್ಯ ಕೇಳಿದ್ದಾರೆ.ಶಾಸಕನ ಪುತ್ರಿಯಿಂದ ದರ್ಪ MLADU

ಆದರೆ ಪಿಎಸ್‌ ಐ ಸವಿತಾ ಅವರು ಹೆಚ್ಚು ಜನರು ಇದ್ದಾರೆ ಇಂದು ಆಗಲ್ಲ ಎಂದು ತಿಳಿಸಿದ್ದು ಇದೇ ವೇಳೆ ಮಫ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮಿ ಅವರು ಗರ್ಭಗುಡಿಗೆ ತೆರಳಿದ್ದಾರೆ. ಆಗ ಐಶ್ವರ್ಯ ಇದನ್ನು ಪ್ರಶ್ನೆ ಮಾಡಿದ್ದು ಅವರು ನಮ್ಮ ಸರ್ಕಲ್ ಇನ್ಸ್ ಪೆಕ್ಟರ್ ಅವರು ಡ್ಯೂಟಿಯಲ್ಲಿ ಇದ್ದಾರೆ ಎಂದು ಪಿಎಸ್‌ ಐ ಸವಿತಾ ಉತ್ತರಿಸಿದ್ದಾರೆ.ಎಸ್‌ ಐ‌ಗೆ ಕಪಾಳಮೋಕ್ಷ jk02_new jk02 new

ಈ ಸಮಯದಲ್ಲಿ ಐಶ್ವರ್ಯ  ನಾನು ಹೋಗಬೇಕು ಬಿಡು ಎಂದಿದ್ದು,  ಪಿಎಸ್ ಐ ಸವಿತಾ ಅವರು ಮತ್ತು ಐಶ್ವರ್ಯ  ನಡುವೆ ವಾಗ್ವಾದವಾಗಿದೆ. ಕೊನೆಗೆ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಪಿಎಸ್‌ ಐ ಸವಿತಾ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ‌ ಕುರಿತು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: MLA, daughter, slaps, female SI, insulting