Tuesday, September 29, 2026

BDA Apartments

ನಟ ದರ್ಶನ್ ಗೆ ಹಿನ್ನೆಡೆ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ BDA JK_Adv BDA Adv
Home Cinema ನಟ ದರ್ಶನ್ ಗೆ ಹಿನ್ನೆಡೆ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್

ನಟ ದರ್ಶನ್ ಗೆ ಹಿನ್ನೆಡೆ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು,ಆಗಸ್ಟ್,13,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದ ಅದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ನಟ ದರ್ಶನ್ ಗೆ ಹಿನ್ನೆಡೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮಾಫಿ ಸಾಕ್ಷಿಯಾಗಲು 14ನೇ ಆರೋಪಿ ಪ್ರದೋಷ್ ಮನವಿ ಸಲ್ಲಿಸಿದ್ದು ಆದರೆ ಇದಕ್ಕೆ ಆಕ್ಷೇಪಣೆ ಸಲ್ಲಿಸಲು ನಟ ದರ್ಶನ್ ಸೇರಿ ಸಹ ಆರೋಪಿಗಳಿಗೆ  ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಅವಕಾಶ ನಿರಾಕರಿಸಿತ್ತು.ನಟ ದರ್ಶನ್ ಗೆ ಹಿನ್ನೆಡೆ renukaswamy-darshan renukaswamy darshan

59ನೇ ಸಿಸಿಎಚ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಆರೋಪಿ ನಟ ದರ್ಶನ್  ಮೇಲ್ಮನವಿಯನ್ನ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.

ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ high court darshan ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೇಲ್ಮನವಿ ವಿಚಾರಣೆ ವೇಳೆ ನಟ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, ಮಾಫಿ ಸಾಕ್ಷಿಯಾಗುವಂತೆ ಕೋರಿರುವ ಅರ್ಜಿಯ ಪ್ರತಿಯನ್ನೂ ನೀಡಿಲ್ಲ. ಪ್ರಕ್ರಿಯೆಯ ಲೋಪದ ಬಗ್ಗೆಯಷ್ಟೇ ನಾವು ವಾದ ಮಾಡುತ್ತೇವೆ. ಅದಕ್ಕೂ ಅವಕಾಶ ಕೊಟ್ಟಿಲ್ಲ ಎಂದರು.ನಟ ದರ್ಶನ್ ಗೆ ಹಿನ್ನೆಡೆ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ jk02_new jk02 new

ಆದರೆ ವಾದ ತಳ್ಳಿಹಾಕಿದ ನ್ಯಾಯಪೀಠವು, ನಿಮ್ಮ ವಾದ ಒಪ್ಪಲು ಸಾಧ್ಯವಿಲ್ಲ. ಮಾಫಿ ಸಾಕ್ಷಿ ಆಕ್ಷೇಪಿಸಲು ಸಹ ಆರೋಪಿಗೆ ಹಕ್ಕಿಲ್ಲ. ಸಹ ಆರೋಪಿಗೆ ಆಕ್ಷೇಪದ ಅವಕಾಶ ನೀಡಿದರೇ ಪ್ರಕ್ರಿಯೆಯೇ ಮುಗಿಯುವುದಿಲ್ಲ. ಹೀಗಾಗಿ 59ನೇ ಸಿಸಿಎಚ್ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿತು.

Key words: Renukaswamy, Murder case, actor Darshan, High Court