Tuesday, September 29, 2026

BDA Apartments

ಬೆಂಗಳೂರು ವಾಹನ ಸವಾರರಿಗೆ ಮತ್ತೊಂದು ಶಾಕ್: ಫ್ರೀ ಪಾರ್ಕಿಂಗ್ ಮಾಡಿದ್ರೆ ಬೀಳ...
Home Front Page ಬೆಂಗಳೂರು ವಾಹನ ಸವಾರರಿಗೆ ಮತ್ತೊಂದು ಶಾಕ್: ಫ್ರೀ ಪಾರ್ಕಿಂಗ್ ಮಾಡಿದ್ರೆ ಬೀಳುತ್ತೆ ದಂಡ

ಬೆಂಗಳೂರು ವಾಹನ ಸವಾರರಿಗೆ ಮತ್ತೊಂದು ಶಾಕ್: ಫ್ರೀ ಪಾರ್ಕಿಂಗ್ ಮಾಡಿದ್ರೆ ಬೀಳುತ್ತೆ ದಂಡ

ಬೆಂಗಳೂರು, ಆಗಸ್ಟ್,13,2026 (www.justkannada.in) : ಬೆಂಗಳೂರು ವಾಹನ ಸವಾರರಿಗೆ ಜಿಬಿಎ ಮತ್ತೊಂದು ಶಾಕ್ ನೀಡಿದ್ದು ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್ ಹಾಕಲು ಮುಂದಾಗಿದೆ.

ಇನ್ಮುಂದೆ  ಫ್ರೀ ಪಾರ್ಕಿಂಗ್ ಮಾಡಿದರೇ ದಂಡ ವಿಧಿಸಲು ಜಿಬಿಎ ತೀರ್ಮಾನಿಸಿದೆ.  ಸೈಕಲ್ ಹೊರತುಪಡಿಸಿ ಎಲ್ಲಾ ವಾಹನಗಳಿಗೂ ದಂಡ ವಿಧಿಸಲು ಮುಂದಾಗಿದ್ದು ಈ ಕುರಿತು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

ಆಟೋ ನಿಲ್ದಾಣಗಳಲ್ಲಷ್ಟೇ ಫ್ರೀಪಾರ್ಕಿಂಗ್ ಗೆ ಅವಕಾಶ ನೀಡಲಾಗಿದ್ದು ರಸ್ತೆಗಳನ್ನು ಎಬಿಸಿ ಮಾದರಿಗಳಾಗಿ ವಿಂಗಡಿಸಿ ಶುಲ್ಕ ವಿಧಿಸಲು ಮುಂದಾಗಿದೆ.   ರಾತ್ರಿ  8ರಿಂದ ಬೆಳಿಗ್ಗೆ 8 ಗಂಟೆವರೆಗೆ ಮಾತ್ರ ಫ್ರೀಪಾರ್ಕಿಂಗ್ ಗೆ  ಅವಕಾಶ ನೀಡಲಾಗಿದೆಬೆಂಗಳೂರು ವಾಹನ ಸವಾರರಿಗೆ ಮತ್ತೊಂದು ಶಾಕ್ car

ಹೊಸ ನೀತಿಯಡಿ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ಜಿಬಿಎ ನಿರ್ಧರಿಸಿದೆ. ವಾಹನಗಳಿಗೆ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ ನಗರದ ರಸ್ತೆಗಳನ್ನು A, B, ಹಾಗೂ C ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ‘ಆನ್-ಸ್ಟ್ರೀಟ್’ (ರಸ್ತೆ ಬದಿ), ‘ಆಫ್-ಸ್ಟ್ರೀಟ್’ (ನಿಗದಿತ ಪಾರ್ಕಿಂಗ್ ತಾಣ) ಮತ್ತು ‘ಮಾಸಿಕ ಪಾಸ್’ ಎಂಬ ಮೂರು ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ.

ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತಡೆಯಲು ಕೆಲವು ಸೂಕ್ಷ್ಮ ವಲಯಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ/ನಿಷೇಧಿಸಲಾಗಿದೆ:

ಮೆಟ್ರೋ ಹಾಗೂ ಪ್ರಮುಖ ಬಸ್ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶ, ಆರ್ಟಿರಿಯಲ್ (ಮುಖ್ಯ ಸಂಪರ್ಕ) ರಸ್ತೆಗಳು, ಟ್ರಾಫಿಕ್ ಸಿಗ್ನಲ್‌ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ, ಉಪಮುಖ್ಯ ರಸ್ತೆಗಳ ಜಂಕ್ಷನ್‌ಗಳಿಂದ 25 ಮೀಟರ್ ಅಂತರದವರೆಗೆ ಫ್ರೀ ಪಾರ್ಕಿಂಗ್ ನಿಷೇಧಿಸಲಾಗಿದೆ.

ರಾತ್ರಿ ಪಾರ್ಕಿಂಗ್ & ಮಾಲೀಕರಿಗಷ್ಟೇ ವಿನಾಯಿತಿ/ದಂಡದ ನಿಯಮ

ರಾತ್ರಿ ಪಾರ್ಕಿಂಗ್: ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೆಲವು ಆಯ್ದ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

ಸೈಕಲ್ ಹಾಗೂ ಆಟೋಗಳಿಗೆ ವಿನಾಯಿತಿ: ಸೈಕಲ್ ನಿಲುಗಡೆಗೆ ಹಾಗೂ ನಿಗದಿತ ಆಟೋ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಮನೆ ಮಾಲೀಕರ ಹೊಣೆಗಾರಿಕೆ

ಬಾಡಿಗೆದಾರರಿಗೆ ಪಾರ್ಕಿಂಗ್ ಜಾಗ ಒದಗಿಸುವುದು ಮನೆ ಮಾಲೀಕರ ಕರ್ತವ್ಯ. ರಸ್ತೆ ಬದಿ ಅಥವಾ ಮನೆ ಮುಂದೆ ವಾಹನ ನಿಲ್ಲಿಸಿದರೆ ಅದರ ಶುಲ್ಕ ಅಥವಾ ದಂಡದ ಜವಾಬ್ದಾರಿಯನ್ನು ಮಾಲೀಕರೇ ಹೊರಬೇಕಾಗುತ್ತದೆ.

ಆನ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

A ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 40, ಲಘು ವಾಹನಗಳಿಗೆ (ಕಾರ್ ಇತ್ಯಾದಿ) 80 ರೂಪಾಯಿ.

B ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 30, ಲಘು ವಾಹನಗಳಿಗೆ 60 ರೂ.

C ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 20, ಲಘು ವಾಹನಗಳಿಗೆ 40 ರಿಂದ 60 ರೂ.

ಆಫ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

A ವರ್ಗ: ದ್ವಿಚಕ್ರ ವಾಹನ – ₹20 | ಲಘು ವಾಹನ – 40 ರೂ.

B ವರ್ಗ: ದ್ವಿಚಕ್ರ ವಾಹನ – ₹15 | ಲಘು ವಾಹನ – 30 ರೂ.

C ವರ್ಗ: ದ್ವಿಚಕ್ರ ವಾಹನ – ₹10 | ಲಘು ವಾಹನ – 20 ರೂ.

ಮಾಸಿಕ ಆಫ್-ಸ್ಟ್ರೀಟ್ ಪಾಸ್ ದರಗಳು:

A ವರ್ಗ: ದ್ವಿಚಕ್ರ ವಾಹನಕ್ಕೆ ₹2,000 ಹಾಗೂ ಲಘು ವಾಹನಗಳಿಗೆ 40,000.

B ವರ್ಗ: ದ್ವಿಚಕ್ರ ವಾಹನಕ್ಕೆ ₹1,500 ಹಾಗೂ ಲಘು ವಾಹನಗಳಿಗೆ3,000.

C ವರ್ಗ: ದ್ವಿಚಕ್ರ ವಾಹನಕ್ಕೆ ₹1,000 ಹಾಗೂ ಲಘು ವಾಹನಗಳಿಗೆ 2,000.ಫ್ರೀ ಪಾರ್ಕಿಂಗ್ ಮಾಡಿದ್ರೆ ಬೀಳುತ್ತೆ ದಂಡ jk02_new jk02 new

ಈ ಮೂಲಕ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವವರಿಗೆ ದಂಡ ಬೀಳುವುದು ಖಚಿತವಾಗಿದೆ.

Key words: Bengaluru, motorists, Free parking, fines