Tuesday, September 15, 2026

BDA Apartments

ಮೈಸೂರಿನಲ್ಲಿ ತಾಯಿ –ಮಗಳು ನೇಣಿಗೆ ಶರಣು… BDA JK_Adv BDA Adv
Home Crime ಮೈಸೂರಿನಲ್ಲಿ ತಾಯಿ –ಮಗಳು ನೇಣಿಗೆ ಶರಣು….

ಮೈಸೂರಿನಲ್ಲಿ ತಾಯಿ –ಮಗಳು ನೇಣಿಗೆ ಶರಣು….

ಮೈಸೂರು,ನ,4,2019(www.justkannada.in): ಕೌಟುಂಬಿಕ ಕಲಹ ಹಿನ್ನೆಲೆ, ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಜಯನಗರದ ರೈಲ್ವೆ ಬಡಾವಣೆಯಲ್ಲಿ  ಈ ಘಟನೆ ನಡೆದಿದೆ. ಜಯಾ(35), ಪ್ರಿಯಾ(11) ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು. ಜಯಾ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು,  ಲಿಫ್ಟ್ ಮೆಕ್ಯಾನಿಕ್ ಆಗಿರುವ ಸುಧಾಕರ್ ಅವರೊಂದಿಗೆ 12 ವರ್ಷಗಳ ಹಿಂದೆ ಜಯಾ ಮದುವೆಯಾಗಿದ್ದರು. ಇಬ್ಬರ ನಡುವೆ ಮನಸ್ತಾಪ ಇತ್ತು.

ಹೀಹಾಗಿ ಕೌಟುಂಬಿಕ ಕಲಹಕ್ಕೆ ಬೇಸತ್ತು ರಾತ್ರಿ ಮನೆಯಲ್ಲಿ  ಮಗಳಿಗೆ ನೇಣು ಹಾಕಿ, ಬಳಿಕ ತಾಯಿ ಜಯಾ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Mysore- mother – Daughter- Suicide