Sunday, September 27, 2026

BDA Apartments

ಆ.13ರ ಕರ್ನಾಟಕ ಬಂದ್ ನಿಂದ ಹಿಂದೆ ಸರಿದಿದ್ದೇವೆ-ಕರವೇ ಮುಖಂಡರಿಂದ ಸ್ಪಷ್ಟನೆ BDA...
Home Front Page ಆ.13ರ ಕರ್ನಾಟಕ ಬಂದ್ ನಿಂದ ಹಿಂದೆ ಸರಿದಿದ್ದೇವೆ-ಕರವೇ ಮುಖಂಡರಿಂದ ಸ್ಪಷ್ಟನೆ

ಆ.13ರ ಕರ್ನಾಟಕ ಬಂದ್ ನಿಂದ ಹಿಂದೆ ಸರಿದಿದ್ದೇವೆ-ಕರವೇ ಮುಖಂಡರಿಂದ ಸ್ಪಷ್ಟನೆ

ಬೆಂಗಳೂರು,ಆಗಸ್ಟ್,11,2026 (www.justkannada.in):  ತಮಿಳುನಾಡಿಗೆ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಆಗಸ್ಟ್ 13ಕ್ಕೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಗೆ ಬಹುತೇಕ ಬ್ರೇಕ್ ಬೀಳುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಿಗೆ ನೀರು ಹರಿದು ಬಂದಿದೆ.ಈಗಾಗಲೇ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶಕ್ಕಿಂತ ಹೆಚ್ಚುವರಿಯಾಗಿ ತಮಿಳುನಾಡಿಗೆ ನೀರು ಹರಿದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆ ಮುಖಂಡರು ಕರ್ನಾಟಕ ಬಂದ್ ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.ಆ.13ರ ಕರ್ನಾಟಕ ಬಂದ್ ನಿಂದ ಹಿಂದೆ ಸರಿದಿದ್ದೇವೆ kannada kannada 2

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಶಿವರಾಮೇಗೌಡ, ಕರ್ನಾಟಕ ಬಂದ್ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ.  ರಾಜ್ಯದಲ್ಲಿ ಮಳೆ ಸ್ಥಿತಿ ಉತ್ತಮವಾಗಿರುವುದರಿಂದ ಬಂದ್ ಅವಶ್ಯಕತೆ ಇಲ್ಲ. ಬಂದ್ ಘೋಷಣೆ ಮಾಡಿದಾಗ ಪರಿಸ್ಥಿತಿ  ಬೇರೆ ಇತ್ತು  ಎಂದಿದ್ದಾರೆ.ಕರವೇ ಮುಖಂಡರಿಂದ ಸ್ಪಷ್ಟನೆ jk02_new jk02 new

ಹಾಗೆಯೇ  ಕರವೇ ಮುಖಂಡ ಪ್ರವೀಣ್ ಶೆಟ್ಟಿ ಅವರೂ ಸಹ ಕರ್ನಾಕ ಬಂದ್ ಗೆ ಬೆಂಬಲ ಇಲ್ಲ ಎಂದಿದ್ದು ಬಂದ್ ಗೆ ಕರೆ ನೀಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.

Key words: Karnataka Bandh, August 13th , Karave leaders