Sunday, September 27, 2026

BDA Apartments

Home Front Page ಇಂದು CWRC ಸಭೆ: ಆದೇಶಕ್ಕಿಂತ ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದ ಕಾವೇರಿ ನೀರು

ಇಂದು CWRC ಸಭೆ: ಆದೇಶಕ್ಕಿಂತ ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದ ಕಾವೇರಿ ನೀರು

ನವದೆಹಲಿ,ಆಗಸ್ಟ್,11,2026 (www.justkannada.in):  ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದ್ದು ಈಗಾಗಲೇ ಈ ಹಿಂದೆ ನೀಡಿದ್ದ ಆದೇಶಕ್ಕಿಂತ ಹೆಚ್ಚುವರಿಯಾಗಿ ತಮಿಳುನಾಡಿಗೆ ಕರ್ನಾಟಕ ಕಾವೇರಿ ನೀರು ಹರಿಸಿದೆ.

ಕೆಲವೇ ಕ್ಷಣಗಳಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದ್ದು ಮತ್ತೆ ತಮಿಳುನಾಡು ಕಾವೇರಿ ನೀರಿಗೆ ಬೇಡಿಕೆ ಇಡಲಿದೆ ಎನ್ನಲಾಗಿದೆ. ಕಳೆದ ಸಭೆಯಲ್ಲಿ ಪ್ರತಿದಿನ 3,500 ಕ್ಯೂಸೆಕ್ ನಂತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಲಾಗಿತ್ತು. ಅಂದರೆ 4.5 ಟಿಎಂಸಿ ನೀರು ಹರಿಸುವಂತೆ ಸೂಚಿಸಲಾಗಿತ್ತು.ಇಂದು CWRC ಸಭೆ kabini1

ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ತುಂಬಿದ್ದು ತಮಿಳುನಾಡಿಗೆ 4.5 ಟಿಎಂಸಿಗಿಂತ ಮೂರು ಟಿಎಂಸಿ ಹೆಚ್ಚು ನೀರು ಹರಿದಿದೆ. ಅಂದರೆ 7.5 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದ್ದು ಇದೀಗ ಎಲ್ಲರ ಚಿತ್ತ ಇಂದಿನ ಸಿಡಬ್ಲ್ಯುಆರ್ ಸಿ ಸಭೆಯ ಮೇಲಿದೆ.ಆದೇಶಕ್ಕಿಂತ ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದ ಕಾವೇರಿ ನೀರು jk02_new jk02 new

Key words: CWRC, meeting, today, Cauvery water, Tamil Nadu