Monday, August 10, 2026

BDA Apartments

Home Front Page ಪ್ರತಿಭಟನೆ ಮಾಡುವ ಹಕ್ಕಿದೆ, ಅವರು ಮಾಡಲಿ- ಡಿಸಿಎಂ ಪರಮೇಶ್ವರ್

ಪ್ರತಿಭಟನೆ ಮಾಡುವ ಹಕ್ಕಿದೆ, ಅವರು ಮಾಡಲಿ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಆಗಸ್ಟ್,10,2026 (www.justkannada.in):  ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಪರಮೇಶ್ವರ್,  ಪ್ರತಿಭಟನೆ ಮಾಡುವುದಕ್ಕೆ ಹಕ್ಕಿದೆ. ಅದನ್ನು ಅವರು ಮಾಡಲಿ ಎಐ ಸೆಂಟರ್ ಮಾಡಬೇಕು ಅಂತಾ ಸಿಎಂ ಪ್ರಸ್ತಾಪ ಇಟ್ಟಿದ್ದಾರೆ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯದು  ಎಂದರು.

ನೈಸ್ ರಸ್ತೆಯಲ್ಲಿ ಟೋಲ್ ಕಟ್ಟದಂತೆ ಹೆಚ್ ಡಿಕೆ ಕರೆ ವಿಚಾರ ಕುರಿತು ‍ಪ್ರತಿಕ್ರಿಯಿಸಿದ ಪರಮೇಶ್ವರ್,  ಆರೋಪ ಹೊಸದಲ್ಲ ಬಹಳ ದಿನದಿಂದಲೂ ವಿರೋಧಿಸ್ತಿದ್ದಾರೆ. ಆ ಯೋಜನೆಯ ಸಮಸ್ಯೆ ಬಗೆಹರಿಸುತ್ತೇವೆ ಪರಿಶೀಲೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪ್ರಾಜೆಕ್ಟ್ ಕಂಪ್ಲೀಟ್ ಮಾಡಬೇಕಷ್ಟೆ ಎಂದರು.

ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯ ಗೊಂದಲ ವಿಚಾರ, ಗೊಂದಲ ಏನಿಲ್ಲ. ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದಾರೆ.  ಸಿಎಂ ಡಿಕೆ ಶಿವಕುಮಾರ್ ಬಂದ ಮೇಲೆ ಖಾತೆ ಹಂಚಿಕೆ ಆಗಬಹುದು ಎಂದರು.

Key words: bidadi township, protest, JDS, DCM, Parameshwar