Saturday, August 8, 2026

BDA Apartments

Home Crime ಲೇಡಿ ಸೂಪರ್ವೈಸರ್ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆಗೆ ಶರಣು

ಲೇಡಿ ಸೂಪರ್ವೈಸರ್ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆಗೆ ಶರಣು

ಮೈಸೂರು,ಆಗಸ್ಟ್,8,2026 (www.justkannada.in): ಲೇಡಿ ಸೂಪರ್ವೈಸರ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕೀಟನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹಿನಕಲ್ ನಲ್ಲಿ ಈ ಘಟನೆ ನಡೆದಿದ್ದು ನಾಗೇಶ್ವರಿ ಆತ್ಮಹತ್ಯೆಗೆ ಶರಣಾದ ಮಹಿಳೆ.  ಡೆತ್ ನೋಟ್ ಬರೆದಿಟ್ಟು ನಾಗೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂಪನಿಯೊಂದರಲ್ಲಿ ನಾಗೇಶ್ವರಿ ಟಾಟಾ ಪ್ರಮೋಟರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಈ ಮಧ್ಯೆ ಕಳೆದ 4 ದಿನಗಳ ಹಿಂದೆ ಕಂಪನಿಗೆ ಸೂಪರ್ವೈಸರ್ ಆಗಿ ಡಾಲಿ ಎಂಬ ಮಹಿಳೆ ಬಂದಿದ್ದು ನನ್ನದಲ್ಲದ ತಪ್ಪಿಗೆ ನನ್ನನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಕಳೆದ 4 ತಿಂಗಳಿನಿಂದ ಒಂದು ವೀಕ್ ಆಫ್ ಕೂಡ ಕೊಟ್ಟಿಲ್ಲ. ಎಮರ್ಜೆನ್ಸಿ ರಜೆಗಳನ್ನು ಕೂಡ ಕೊಟ್ಟಿಲ್ಲ .

ಪ್ರಶ್ನೆ ಮಾಡಿದರೆ ಕೆಲಸದಿಂದ ಕಿತ್ತು ಹಾಕಿದರು. ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ. ಡಾಲಿ ಮೇಡಂ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ ನಲ್ಲಿ ನಾಗೇಶ್ವರಿ ಉಲ್ಲೇಖ ಮಾಡಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Lady supervisor, alleges, harassment, Woman, commits suicide