ಬೆಂಗಳೂರು,ಆಗಸ್ಟ್,6,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿ ಮಾಡುವಂತೆ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಎ14 ಪ್ರದೋಷ್ ಮಾಫಿ ಸಾಕ್ಷಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಮತ್ತಿಬ್ಬರನ್ನು ಮಾಫಿ ಸಾಕ್ಷಿ ಮಾಡುವಂತೆ ವಕೀಲರು ಮನವಿ ಮಾಡಿದ್ದಾರೆ. ಪ್ರಕರಣದ ಎ8 ರವಿಶಂಕರ್, ಎ10 ವಿನಯ್ ಪರ ವಕೀಲರು ಈ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಮದ್ಯಾಹ್ನ ಅರ್ಜಿ ಸಲ್ಲಿಸುವುದಾಗಿ ಕೋರ್ಟ್ ಗೆ ವಕೀಲರು ಮನವಿ ಮಾಡಿದ್ದಾರೆ ಎನ್ನಲಾಗಿದೆ. 
ಈ ಸಂದರ್ಭದಲ್ಲಿ ಪ್ರದೋಷ್ ಪರ ವಕೀಲ ದಿವಾಕರ್ ನಮ್ಮ ಅರ್ಜಿ ಜೊತೆ ಸೇರಿಸದಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ.. ನಮ್ಮ ಕಕ್ಷಿದಾರರ ಹೇಳಿಕೆ ದಾಖಲಿಸುತ್ತೇವೆ. ನಂತರ ಪ್ರಾಸಿಕ್ಯೂಷನ್ ನಿರ್ಧರಿಸಿ ಎಂದು ವಕೀಲ ದಿವಾಕರ್ ಮನವಿ ಮಾಡಿದ್ದು 59ನೇ ಸೆಷನ್ಸ್ ನ್ಯಾಯಾಲಯ ಕೆಲಕಾಲ ವಿಚಾರಣೆ ಮುಂದೂಡಿದೆ. ಈ ಮೂಲಕ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Key words: Renukaswamy, murder case, Two Accused, request, Apology witness







