Sunday, September 20, 2026

BDA Apartments

Home Front Page ತನ್ವೀರ್ ಸೇಠ್ ಗೆ ಮಂತ್ರಿ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆ ಪಾತ್ರವಿಲ್ಲ- ಸಚಿವ ಯತೀಂದ್ರ ಸಿದ್ದರಾಮಯ್ಯ

ತನ್ವೀರ್ ಸೇಠ್ ಗೆ ಮಂತ್ರಿ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆ ಪಾತ್ರವಿಲ್ಲ- ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಆಗಸ್ಟ್,6,2026 (www.justkannada.in):  ಶಾಸಕ ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಲು ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ ಎಂದು ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಾಕ್ಷಿಯಿಲ್ಲ, ಆಧಾರವಿಲ್ಲ ಸುಮ್ಮನೆ ಹೇಳ್ಳುತ್ತಾರೆ. ತಂದೆಯವರು ಯಾರಿಗೂ ಕೂಡ ರೆಕ್ಮೆಂಡ್ ಮಾಡಿಲ್ಲ. ಶಾಸಕ ತನ್ವೀರ್‌ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ತಂದೆ ಪಾತ್ರವಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿಮಠಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಿಎಂ ಬರ ಅಧ್ಯಯನ ಮಾಡುವಂತೆ ತಿಳಿಸಿದ್ದಾರೆ. ಇಂದು ಮತ್ತು‌ ನಾಳೆ ಜಿಲ್ಲೆಯ ವಿವಿದೆಢೆ ಭೇಟಿ‌ ನೀಡುವೆ. ಎಲ್ಲೆಲ್ಲಿ ಮಳೆ‌ ಕೊರತೆ ಆಗಿದೆ. ಆಯಾ ತಾಲ್ಲೂಕುಗಳಿಗೆ ನಾನು ಭೇಟಿ‌ ನೀಡುವೆ. ಮೊದಲು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಮಾಡಿದರು. ಈಗ ಬಹುತೇಕ ನಾನೇ ಎಂದು ಫಿಕ್ಸ್ ಮಾಡಿದ್ದಾರೆ. ಮೊದಲಿಗೆ ಜ್ಞಾನಪ್ರಕಾಶ ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಂತರ ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆಯುವೆ ಎಂದರು.

ಅವರಿಗೆ ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ

ಸಚಿವ ಸಂಪುಟದ ಬಗ್ಗೆ ಅಸಮಾಧಾನ ವಿಚಾರ ಕುರಿತು ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಯಾರ್ಯಾರು ಅಸಮಾಧಾನ ಇದ್ದಾರೆ. ಅವರನ್ನ ಸಮಾಧಾನ ಮಾಡುವ ಕೆಲಸ ಮುಗಿದಿದೆ. ಶಾಸಕರಾದ ತನ್ವೀರ್‌ಸೇಠ್, ಮಹದೇವಪ್ಪ ಇಬ್ಬರು ಅನುಭವಿ ರಾಜಕಾರಣಿಗಳಾಗಿದ್ದಾರೆ. ಅವರಿಗೆ ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ ಎಂದರು.

ತಂದೆಯವರು ಯಾರಿಗೂ ಕೂಡ ರೆಕ್ಮೆಂಡ್ ಮಾಡಿಲ್ಲ. ತನ್ವೀರ್‌ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ತಂದೆ ಪಾತ್ರವಿಲ್ಲ.  ಸಾಕ್ಷಿಯಿಲ್ಲ, ಆಧಾರವಿಲ್ಲ ಸುಮ್ಮನೆ ಹೇಳುತ್ತಾರೆ. ಇಬ್ಬರಿಗೆ ಮುಸ್ಲಿಂ ಕೋಟಾದಲ್ಲಿ ನೀಡಬೇಕಿತ್ತು. ಅದನ್ನ ಹೈಕಮಾಂಡ್ ಭರ್ತಿ ಮಾಡಿದೆ. ಸಿದ್ದರಾಮಯ್ಯ ಅವರು ಎಷ್ಟು ಮಂದಿಗೆ ರೆಕ್ಮೆಂಡ್ ಮಾಡಿದ್ದಾರೋ ಗೊತ್ತಿಲ್ಲ. ಕೆಲವರ ಹೆಸರನ್ನ ತಂದೆವರು ಹೇಳಿದ್ದರು. ಅವರ ಲಿಸ್ಟ್ ನಾನು‌ ನೋಡಿರಲಿಲ್ಲ. ಈ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ತಂದೆಯವರು ಮಹದೇವಪ್ಪ ಪರ‌ ಕೇಳಿದ್ದು ಸತ್ಯ ಎಂದರು.

ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ

ರಾಜ್ಯವು ಹಿಂದೂ ರಾಷ್ಟ್ರವಾಗಬಾರದು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ. ಶೋಷಣೆ ಆದರೆ ನಾವು ಶೋಷಿತರಾಗಿರುತ್ತೇವೆ. ಅವರೆಲ್ಲರೂ ಶೋಷಣೆ ಮಾಡುವುದನ್ನೇ ಮುಂದುವರಿಸುತ್ತಾರೆ. ಆ ಕಾರಣಕ್ಕೆ ಹಿಂದೂರಾಷ್ಟ್ರಕ್ಕೆ ವಿರೋಧವಿದೆ. ಇಷ್ಟು ವರ್ಷಗಳ ಕಾಲ ದೇಶ ಸೆಕ್ಯುಲರ್ ದೇಶವಾಗಿದೆ. ಈಗಲೂ‌ ಭಾರತ ಧರ್ಮಾಧಾರಿತ ರಾಷ್ಟ್ರ ಆಗಿಲ್ಲ. ಧರ್ಮ ನಿರಪೇಕ್ಷಿತ ರಾಷ್ಟ್ರ ಎಂಬುದು ನಮ್ಮ‌ ಹೇಳಿಕೆ ಎಂದರು.ಸಚಿವ ಯತೀಂದ್ರ ಸಿದ್ದರಾಮಯ್ಯ BDA JK_Adv BDA Adv

ಅಣೆಕಟ್ಟೆ ತುಂಬಿರುವ ಕಾರಣ ನಾಲೆಗಳಿಗೆ ನೀರು ಬಿಡಬೇಕು ಎಂದ ಸಚಿವ ಯತೀಂದ್ರ ಸಿದ್ದರಾಮಯ್ಯ ಕಂಬಳ ವಿಚಾರದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಸಿಎಂ‌ ನಡೆಯಬೇಕು ಎಂದರೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಜಾತಿ ಆಧಾರಿತ ಪ್ರಾತಿನಿಧ್ಯ ನೀಡಿ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ಪ್ರತಿಕ್ರಿಯಿಸಿದ  ಡಾ.ಯತೀಂದ್ರ  ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವು ಅಡೆತಡೆ ಆಗುತ್ತವೆ. ಕೇವಲ ಸಚಿವ ಸ್ಥಾನವಲ್ಲ, ಮಂಡಲದ ಅಧಿಕಾರ ಇರುತ್ತದೆ ಎಂದರು.

ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು: ಅವರನ್ನೇ ಕೇಳಬೇಕು

ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು ವಿಚಾರ, ತಂದೆಯವರು ಆವತ್ತು ಹುಟ್ಟುಹಬ್ಬ ಇತ್ತು. ಅವರಿಗೆ ಹೋಗಬಾರದು ಎಂಬುದಿಲ್ಲ. ಶುಭಹಾರೈಸಲು ಹಲವರು ಬಂದಿದ್ದರು. ಆ ಕಾರಣಕ್ಕೆ ಅವರು ಹೋಗಲು ಆಗಲಿಲ್ಲ. ತಂದೆಯವರಿಗೆ ಯಾವುದೇ ಅಸಮಾಧಾನ ಇಲ್ಲ. ತಂದೆಯವರು ಯಾಕೆ ಹೋಗಿಲ್ಲ ಅಂತ ಅವರನ್ನೇ ಕೇಳಬೇಕು ಎಂದರು.2026 www justkannada jk02_new jk02 new

ಈ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತರುವುದು ಸರಿಯಲ್ಲ

ಮಹಿಳಾ‌ ಕೋಟದಲ್ಲಿ ಸಚಿವ ಸ್ಥಾನ ತಪ್ಪಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಗಾಯತ್ರಿ ಅವರೇ ಹೇಳಿದ್ದಾರೆ, ನಮಗೆ ಯಾರು ತಪ್ಪಿಸಿದ್ದಾರೋ ಗೊತ್ತಿಲ್ಲ ಎಂದು. ಹೀಗಾಗಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತರುವುದು ಸರಿಯಲ್ಲ. ಪ್ರಮಾಣವಚನಕ್ಕೆ ತೀರ್ಮಾನ ಮಾಡಿದ್ದು ಹೈಕಮಾಂಡ್. ಪಕ್ಷದ ಹಿತ ಎಲ್ಲರಿಗೂ ಮುಖ್ಯ. ಪಕ್ಷ ಇದ್ದರೆ ಮಾತ್ರ ಎಲ್ಲರೂ. ಈ‌ ಕಾರಣಕ್ಕೆ ರಾಜೀನಾಮೆ ಮಾತನ್ನ ಬಿಡಿ. ಪಕ್ಷ ಎಲ್ಲರಿಗೂ ಎಲ್ಲಾ ಅವಕಾಶ ನೀಡುತ್ತದೆ. ಅಲ್ಪ ಅವಧಿಗೆ ದುಡುಕು‌ ನಿರ್ಧಾರ ಬೇಡ ಎಂದರು.

Key words: Mysore- Minister, Yathindra Siddaramaiah, Tanveer Sait,  ministerial post