ಬೆಂಗಳೂರು,ಆಗಸ್ಟ್,5,2026 (www.justkannada.in): ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಸಿಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಅಸಮಾಧಾನಿತ ಶಾಸಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಸಿಗದ ವಿಚಾರವನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಆಗುವ ಅವಕಾಶ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ರಾ? ಒಂದು ಬಾರಿಯಾದರೂ ಪಕ್ಷದಿಂದ ಅನ್ಯಾಯ ಆಗಿದೆ ಅಂತಾ ಏನಾದರೂ ಹೇಳಿದ್ರಾ? ಎಂದರು.
ರಾಜೀನಾಮೆ ಕೊಟ್ಟರೆ ಸ್ವೀಕಾರ ಮಾಡುತ್ತೇವೆ ಎಂದು ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪಕ್ಷ ಕಟ್ಟುವುದು ಎಲ್ಲರಿಗೂ ಗೊತ್ತಿದೆ. ಜನರು ಕೂಡ ರಾಜಕಾರಣಿಗಳನ್ನ ನೋಡುತ್ತಿದ್ದಾರೆ ಸಚಿವ ಸಂಫುಟದಲ್ಲಿ ಇರುವ ನಮ್ಮಂತಹವರನ್ನ ನೋಡುತ್ತಿದ್ದಾರೆ. ಸಂಪುಟದಿಂದ ಹೊರಗುಳಿದವರನ್ನೂ ಕೂಢ ನೋಡುತ್ತಿದ್ದಾರೆ. ಪಕ್ಷದ ವಿರುದ್ದ ಮಾತನಾಡುತ್ತಿರುವವರನ್ನೂ ಕೂಢ ನೋಡುತ್ತಿದ್ದಾರೆ. ಕಾರ್ಯಕರ್ತರು, ಮತದಾರರು ಇಲ್ಲ ಅಂದ್ರೆ ನಾನು ಏನೂ ಅಲ್ಲ. ನಾನು ಪಕ್ಷ ಹಾಗೂ ಕಾರ್ಯಕರ್ತರಿಗೆ ಚಿರ ಋಣಿಯಾಗಿರುತ್ತೇನೆ. ಪಕ್ಷದ ವರ್ಚಸ್ಸಿನಿಂದ ನಾವಿದ್ದೇವೆಂದು ಯಾರು ಮರೆಯಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Key words: Mallikarjuna Kharge, CM Post, injustice, party, Minister, Priyank Kharge







