Sunday, September 20, 2026

BDA Apartments

ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜ: ಹೈಕಮಾಂಡ್ ಸರಿಪಡಿಸುತ್ತೆ- ಸಚಿವ ಯತೀಂ...
Home Front Page ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜ: ಹೈಕಮಾಂಡ್ ಸರಿಪಡಿಸುತ್ತೆ- ಸಚಿವ ಯತೀಂದ್ರ ಸಿದ್ದರಾಮಯ್ಯ

ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜ: ಹೈಕಮಾಂಡ್ ಸರಿಪಡಿಸುತ್ತೆ- ಸಚಿವ ಯತೀಂದ್ರ ಸಿದ್ದರಾಮಯ್ಯ

ಬೀದರ್, ಆಗಸ್ಟ್,4,2026 (www.justkannada.in):  ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಮಾಧಾನ  ಸಹಜ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನು ಸರಿಪಡಿಸುತ್ತದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಂಫುಟ ವಿಸ್ತರಣೆಯಾದಾಗ ಎಲ್ಲಾ ಪಕ್ಷಗಳಲ್ಲೂ ಅಸಮಾಧಾನ ಸಹಜ.  ಸರ್ಕಾರ ರಚನೆಯಾದಾಗ ಹಿರಿಯರು ಕಿರಿಯರನ್ನು ಸೇರಿಸಿ ಸಂಪುಟ ರಚಿಸಬೇಕು. ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜ oath.jpg123

ಸಚಿವಸ್ಥಾನ ಸಿಗದವರು ಅಸಮಾಧಾನಗೊಳ್ಳುತ್ತಾರೆ.  ಪಕ್ಷದ ಹೈಕಮಾಂಡ್  ಎಲ್ಲವನ್ನೂ ಸರಿ ಮಾಡುತ್ತೆ.  ಈ ಬಾರಿ ಮುಸ್ಲೀಂ ಸಮುದಾಯದ ಮೂವರಿಗೆ ಅವಕಾಶ ನೀಡಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಹೈಕಮಾಂಡ್ ಸರಿಪಡಿಸುತ್ತೆ jk02_new jk02 new

Key words: Dissatisfaction, cabinet, expanded, Minister, Yathindra Siddaramaiah