Monday, August 3, 2026

BDA Apartments

Home Crime ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ,ಆಗಸ್ಟ್,3,2026 (www.justkannada.in): ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ವೇದಾಂಗ್ ಅವರು 9,950 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಬಂಧಿಸಲಾಗಿದೆ.

ದೂರುದಾರ ಸಂಜೀವ್ ಅವರು, ತಮ್ಮ ಮೃತ ಮಾವ ಕಿಶನ್ ಪವಾರ್ ಅವರ ಹೆಸರಿನಲ್ಲಿದ್ದ ಆಜಾದಪುರ ಗ್ರಾಮದ ನಿವೇಶನವನ್ನು ತಮ್ಮ ಅತ್ತೆ ದಸ್ಮಾಬಾಯಿ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಡುವ ಸಂಬಂಧ ದಾಖಲೆಗಳ ಪ್ರಕ್ರಿಯೆ ನಡೆಸಿಕೊಡಲು ಕಾರ್ಯದರ್ಶಿ ವೇದಾಂಗ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟರ್ ರವಿ ಪವಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ₹9,950 ಲಂಚ ಪಡೆಯುವ ವೇಳೆ ಆರೋಪಿಯನ್ನು ಬಲೆಗೆ ಬೀಳಿಸಿ ಬಂಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

Key words: Gram Panchayat, Secretary, Lokayukta, trap